ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಂಡಕ್ಟರ್-ಡ್ರೈವರ್ ಮೇಲೆ ಹಲ್ಲೆ ಕೇಸ್ ಹೆಚ್ಚಳವಾಗಿದ್ದು, BMTC ಅಧಿಕಾರಿಗಳು, ಕ್ರಮಕ್ಕೆ ಮುಂದಾಗಿದ್ದಾರೆ.
Egg Benefits: ಪ್ರತಿನಿತ್ಯ ಮೊಟ್ಟೆ ತಿನ್ನೋ ಅಭ್ಯಾಸ ಇದ್ಯಾ? ಹಾಗಾದ್ರೆ ಮೊದಲು ಈ ಸುದ್ದಿ ನೋಡಿ!
ಹಲ್ಲೆ ಘಟನೆ ನಡೆದರೆ ಕೂಡಲೇ ಜಾಗೃತ ಮತ್ತು ಭದ್ರತಾ ನಿರ್ದೇಶಕರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ. ಘಟನೆ ನಡೆದು 30 ನಿಮಿಷದೊಳಗೆ ಸಂಪೂರ್ಣ ಮಾಹಿತಿ ನೀಡಬಹುದಾಗಿದೆ. ದಿನದ ಯಾವುದೇ ಸಮಯದಲ್ಲಾದ್ರೂ ಮಾಹಿತಿ ನೀಡುವಂತೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶಕರಿಂದ ಸೂಚನೆ ನೀಡಲಾಗಿದೆ.
ಸೆಪ್ಟೆಂಬರ್ 8 ರಂದು ವೋಲ್ವೋ ಬಸ್ನಲ್ಲಿ ಅಟ್ಯಾಕ್ ಆಗಿತ್ತು. ಅತ್ತಿಬೆಲೆಯಿಂದ ಬರ್ತಿದ್ದ ಬಸ್ನಲ್ಲಿ ಸ್ಕ್ರೂ ಡ್ರೈವರ್ನಿಂದ ಕಂಡಕ್ಟರ್ ಮೇಲೆ ಹಲ್ಲೆ ಯತ್ನ ಆಗಿತ್ತು. ಇನ್ನು ಅಕ್ಟೋಬರ್ 1 ರಂದು ವೈಟ್ಫೀಲ್ಡ್ನ ಐಟಿಪಿಎಲ್ನಲ್ಲಿ ನಿರ್ವಾಹಕ ಯೋಗೇಶ್ಗೆ ಹರ್ಷಾ ಅನ್ನೋ ಪ್ರಯಾಣಿಕ ಚಾಕು ಹಾಕಿದ್ದ. ಅದೇ ಅಕ್ಚೋಬರ್ 18 ರಂದು ಟಿನ್ ಫ್ಯಾಕ್ಟರಿ ಬಳಿ ಹೇಮಂತ್ ಎಂಬಾತ ಕಂಡಕ್ಟರ್ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿದ್ದ.
ಹೀಗೆ ಒಂದೇ ಕೇಸ್ ಅಲ್ಲ, ಇನ್ನೂ ಹಲವು ಕೇಸ್ ಗಳು ಇದೇ ರೀತಿ ಕೇಸ್ ಆಗಿವೆ.