ಧಾರವಾಡ: ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ ಎಂದು ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಒಪ್ಪಿಕೊಂಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಇರೋದು ಎಲ್ಲರಿಗೆ ಕಂಡು ಬಂದ ವಿಷಯ. ಅದರಲ್ಲಿ ಮುಚ್ಚುವಂತ ವಿಷಯ ಏನೂ ಇಲ್ಲ. ಅದನ್ನ ಒಂದು ಕಡೆ ಕೂತು ಬಗೆಹರಿಸಿಕೊಳ್ಳುವ ಅವಶ್ಯಕತೆ ಇದೆ. ಕಳೆದ ಕೆಲ ದಿನಗಳಿಂದ ನಮ್ಮ ಹೈಕಮಾಂಡ್ ಒಂದಿಲ್ಲ ಒಂದು ಚುನಾವಣೆಯಲ್ಲಿ ಇದೆ. ಇಷ್ಟು ದಿನ ಮಹಾರಾಷ್ಟ್ರ ಹಾಗೂ ಛತ್ತೀಸ್ ಘಡ ಚುನಾವಣೆಯಲ್ಲಿ ಇದ್ದರು. ಈಗ ಮತ್ತೇ ದೆಹಲಿ ಹಾಗೂ ಬಿಹಾರ್ ಚುನಾವಣೆ ಬಂದಿದೆ. ನಮ್ಮ ರಾಜ್ಯಕ್ಕೆ ಅವರಿಗೆ ಸಮಯ ಕೊಡಲು ಆಗಿಲ್ಲ. ಅವರೇ ಬಂದು ಸಮಸ್ಯೆ ಇತ್ಯರ್ಥ ಮಾಡ್ತಾರೆ ಎಂಬ ನಂಬಿಕೆ ಇದೆ. ಇದು ಪಕ್ಷದ ಒಳಗೆ ಚೌಕಟ್ಟಿನಲ್ಲಿ ಮಾತನಾಡುವ ವಿಚಾರ, ಟಿವಿ ಮುಂದೆ ಮಾತಾಡೊದಲ್ಲ,ಅಲ್ಲೇ ಬಗೆಹರಿಸಿಕೊಳ್ತೆವೆ. ಸಮಾಧಾನ ಕೂಡಾ ಸಿಗಲಿದೆ, ಜಗತ್ತಿನ ಎಲ್ಲ ಸಮಸ್ಯೆಗೆ ಉತ್ತರ ಸಿಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು
ಡಿವಿ ಸದಾನಂದ ಗೌಡ ವಿರುದ್ಧ ಯತ್ನಾಳ್ ಕಿಡಿ : ವಚನದ ಮೂಲಕ ಡಿವಿಎಸ್ ಗೆ ಟಾಂಗ್
ಇದೇ ವೇಳೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಬಳಿ ಡಿ. 10ರಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಚಳವಳಿಗೆ ವಿಜಯಾನಂದ ಕಾಶಪ್ಪನವರ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಈ ಹಿಂದೆ ನಾವು ಸಹ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಸಮಾಜಕ್ಕೆ ಮೀಸಲಾತಿಗಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೆವು. ಮುಖ್ಯಮಂತ್ರಿಗೆ ಸಮಾಜದ ಮೀಸಲಾತಿ ವಿಷಯವಾಗಿ ಮನವರಿಕೆ ಮಾಡಿದ್ದೆವು. ಆದರೆ, ವಿಜಯಾನಂದ ಕಾಶಪ್ಪನವರ ಒಂದು ವೀರಶೈವ ಲಿಂಗಾಯತ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕಾಗಿ ಸರ್ಕಾರದ ಪರ ನಿಂತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.