ಬೆಂಗಳೂರು: ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ, ಏನೇ ಆದ್ರೂ ಎದುರಿಸುತ್ತೇನೆ ಎಂದು ಸಚಿವ ತಿಮ್ಮಾಪುರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅಬಕಾರಿ ಇಲಾಖೆ ಆಡಿಯೋ ವಿಚಾರದಲ್ಲಿ ಜೆಸಿಯಿಂದ ವರದಿ ಪಡೆದಿದ್ದೇನೆ. ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಇಲಾಖೆ ಮೇಲೆ ಲಂಚದ ಆರೋಪ ಬಂದಿರೋ ವಿಚಾರವಾಗಿ ವರದಿ ತರಿಸಿಕೊಳ್ಳೋಣ ಎಂದು ತಿಳಿಸಿದರು.
ಪುರುಷರೇ ಗಮನಿಸಿ.. ನಿಮ್ಮ ಈ 6 ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ ಲವಂಗದ ಎಣ್ಣೆ!
ಅಬಕಾರಿ ಇಲಾಖೆ ಮೇಲೆ ಆಗಾಗ ಇಂತಹ ಆರೋಪ ಕೇಳಿ ಬರುತ್ತದೆ. ಇಲಾಖೆಯಲ್ಲಿ ಕೆಲವು ವಿಚಾರಗಳನ್ನು ಸರಿ ಮಾಡಬೇಕು. ಅದನ್ನು ಮಾಡುತ್ತೇನೆ. ನನ್ನ ತಲೆದಂಡದ ಪ್ರಶ್ನೆ ಬರಲ್ಲ. ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ. ಏನಾದರೂ ಇದ್ದರೆ ನಾನು ಅದನ್ನು ಎದುರಿಸುತ್ತೇನೆ. ಹಿಂದೆಯೂ ಅಬಕಾರಿ ಮಂತ್ರಿ ಆಗಿದ್ದವರ ಮೇಲೆ ಇಂತಹ ಆರೋಪಗಳು ಬಂದಿದೆ. ಎಲ್ಲಾ ಮಂತ್ರಿಗಳ ಮೇಲೂ ಆರೋಪ ಬಂದಿದೆ ಎಂದು ಹೇಳಿದರು.