ನವದೆಹಲಿ: ಇಡಿ ದಾಳಿ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದೆಹಲಿಯ ಬಿಜ್ವಾಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜಾರಿ ನಿರ್ದೇಶನಾಲಯ ತಂಡವು ಸೈಬರ್ ವಂಚನೆ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿತ್ತು. ಈ ವೇಳೆ ಅಶೋಕ್ ಶರ್ಮಾ ಮತ್ತು ಆತನ ಕುಟುಂಬದವರು ಸೇರಿಕೊಂಡು ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ಇಡಿ ಸಹಾಯಕ ನಿರ್ದೇಶಕರಿಗೆ ಗಾಯಗಳಾಗಿವೆ. ಘಟನೆ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬೃಹತ್ ಸೈಬರ್ ಕ್ರೈಮ್ ನೆಟ್ವರ್ಕ್ಗೆ ಸಂಬಂಧಿಸಿರುವ ಉನ್ನತ ಚಾರ್ಟರ್ಡ್ ಅಕೌಂಟೆಂಟ್ಗಳನ್ನು ಗುರಿಯಾಗಿಟ್ಟುಕೊಂಡು ಇಡಿಯ ಹೈ-ಇಂಟೆನ್ಸಿಟಿ ಯುನಿಟ್ ವ್ಯಾಪಕ ದಾಳಿ ಪ್ರಾರಂಭಿಸಿದೆ. ಫಿಶಿಂಗ್ ಹಗರಣ, ಕ್ಯೂಆರ್ ಕೋಡ್ ವಂಚನೆ, ಅರೆಕಾಲಿಕ ಉದ್ಯೋಗ ಹಗರಣ. ಸಾವಿರಾರು ಸೈಬರ್ ಅಪರಾಧಗಳು ಸೇರಿದಂತೆ ಅಕ್ರಮ ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು.