ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸದೇ ತಪ್ಪು ಮಾಡಿದೆ ಎನ್ನುವಂತಹ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ಕನ್ನಡಿಗರ ಆಕ್ರೋಶಕ್ಕೂ ಆರ್ಸಿಬಿ ಗುರಿಯಾಗಿದೆ. ಆರ್ಸಿಬಿ ಹಿಂದಿ ಹೇರಿಕೆ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇದಕ್ಕೆ ಕಾರಣ ಆರ್ಸಿಬಿ ಇದೀಗ ಎಕ್ಸ್ನಲ್ಲಿ ಹಿಂದಿ ಪೇಜ್ ಆರಂಭಿಸಿದೆ. ಆರ್ಸಿಬ ಹಿಂದಿ ಎಕ್ಸ್ ಪೇಜ್ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಆರ್ಸಿಬಿ ತಂಡ ಹಿಂದಿ ಪೇಜ್ ಆರಂಭಿಸುವ ಅವಶ್ಯಕತೆ ಏನಿತ್ತು? ಇದು ಹಿಂದಿ ಹೇರಿಕೆಯ ಮೊದಲ ಹೆಜ್ಜೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿರುವುದು ಇದೊಂದೆ ಕ್ರೀಡಾ ಫ್ರಾಂಚೈಸಿಯಲ್ಲ. ಹಲವು ಕ್ರೀಡಾ ಫ್ರಾಂಚೈಸಿಗಳು ಬೆಂಗಳೂರಿನಲ್ಲಿದೆ. ಎಲ್ಲಾ ತಂಡಗಳು ಕನ್ನಡಿಗರು, ಕನ್ನಡ ಭಾಷೆ, ಕ್ರೀಡೆಗೆ ಗೌರವ ನೀಡುತ್ತಿದೆ. ಆದರೆ ಆರ್ಸಿಬಿ ಮಾತ್ರ ಹಿಂದಿಗಾಗಿ ಹೊಸ ಪೇಜ್ ಆರಂಭಿಸಿದೆ ಎಂದು ಆರೋಪ ಕೇಳಿಬಂದಿದೆ.
ಗಮನಿಸಿ.. ಗುರುವಾರದ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು..!?
ನಮಗೆ RCB ಹಿಂದಿ ಪೇಜ್ ಬೇಕಾಗಿಲ್ಲ ಎಂದು X ನಲ್ಲಿ RCB ಹಿಂದಿ ಪೇಜ್ ಗೆ ವಿರೋಧ ವ್ಯಕ್ತವಾಗಿದೆ. ನಿಮಗೆ ಬೆಂಬಲ ಕೊಡ್ತಿರೋದು ಕನ್ನಡಿಗರು, ಬೆಂಗಳೂರು ಅನ್ನೋ ಹೆಸರು ಇಟ್ಟುಕೊಂಡು ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್, ಆರ್ ಸಿ ಬಿ ಗಿಂತಲೂ ನಮಗೆ ನಮ್ಮ ಕನ್ನಡ,ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು. Remove Hindi page of rcb immediately ನಮಗೆ ಅದು ಬೇಕಾಗಿಲ್ಲ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.