ತುಮಕೂರು: 12 ವರ್ಷಗಳ ಹಿಂದೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಇಬ್ಬರು ಆರೋಪಿಗಳಿಗೆ ತಲಾ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 1,62,000 ರೂ. ದಂಡ ವಿಧಿಸಿ ಎರಡನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲದ ನ್ಯಾಯಾಧೀಶರಾದ ಹೆಚ್. ಅನಂತ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಆರೋಪಿಗಳಾದ ಮಹಂತೇಶ್, ಶ್ರೀನಿವಾಸ್ ಯುವತಿಯರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಬಳಿಕ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದರು.
ಟಾಯ್ಲೆಟ್ ಕಮೋಡ್ ನಲ್ಲಿ ನವಜಾತ ಶಿಶುವಿನ ಶವ : ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ
ನಿರ್ಭಯಾ ಕೇಸ್ಗೂ ಮೂರು ತಿಂಗಳ ಮೊದಲು ನಡೆದಿದ್ದ ಪ್ರಕರಣ ಇದಾಗಿದ್ದು, 2012ರ ಜುಲೈನಲ್ಲಿ ಈ ಘಟನೆ ನಡೆದಿತ್ತು. ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಮೂವರು ಗೆಳತಿಯರ ಪೈಕಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಓರ್ವ ಯುವತಿಯಿಂದ ಮಾತ್ರ ದೂರು ದಾಖಲಾಗಿತ್ತು. ತನಿಖೆಯ ವೇಳೆ ಮತ್ತೋರ್ವ ಯುವತಿ ಮೇಲಿನ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿತ್ತು. ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್ ಪೆಕ್ಟರ್ ಎಸ್.ಕೆ. ಪ್ರಹ್ಲಾದ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ವಿ.ಎ.ಕವಿತ ವಾದ ಮಂಡಿಸಿದ್ದರು.