ರಾಮನಗರ: ರಾಮನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆ ನಡೆದಿದೆ. ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿದೆ. ಹಾರೋಹಳ್ಳಿ ಸಮೀಪದ ದಯಾನಂದ ಆಸ್ಪತ್ರೆಯ ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಆಗ ತಾನೆ ಜನಿಸಿರೋ ಮಗುವನ್ನು ಟಾಯ್ಲೆಟ್ ಕಮೋಡ್ ನಲ್ಲಿ ಹಾಕಿದ್ದಾರೆ. ಶೌಚಾಲಯ ಕಟ್ಟಿಕೊಂಡ ಹಿನ್ನೆಲೆ ಪರಿಶೀಲನೆ ನಡೆಸಿದ ವೇಳೆ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ.
ಮಗು ಜನನ ಮರೆಮಾಚಲು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿರುವ ಪೊಲೀಸರು, ಮಗುವಿನ ಡಿಎನ್ಎ ವರದಿ ಆಧರಿಸಿ ಆರೋಪಿಗಳ ಪತ್ತೆ ಮಾಡಲು ಮುಂದಾಗಿದ್ದಾರೆ.