ಬೆಳಗಾವಿ: ಬೆಳಗಾವಿ ನಗರದಲ್ಲಿ ಮತ್ತೊಂದು ಬೆಚ್ಚಿ ಬೀಳುವ ಘಟನೆ ನಡೆದಿದೆ. ಹಾಡಹಗಲೇ ಪಾಗಲ್ ಪ್ರೇಮಿಯೊಬ್ಬ ಆಸ್ಪತ್ರೆಗೆ ನುಗ್ಗಿ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಕೈ ಚೀಲದಲ್ಲಿ ಮಚ್ಚು ತೆಗೆದುಕೊಂಡು ಬಂದು, ಆಸ್ಪತ್ರೆ ಕೌಂಟರ್ ಬಳಿಯೇ ನರ್ಸ್ಗಾಗಿ ಕಾದು ಕುಳಿತು ಹಲ್ಲೆ ನಡೆಸಿದ್ದಾನೆ. ಈ ಪಾಗಲ್ ಪ್ರೇಮಯ ಕ್ರೌರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಂಪುಟ ಪುನಾರಚನೆ ಸರ್ಕಸ್ : ಸಿದ್ದು ಕ್ಯಾಬಿನೆಟ್ ನಲ್ಲಿ ಹಿರಿಯ ನಾಯಕ ಪುಟ್ಟರಂಗಶೆಟ್ಟಿಗೆ ಸ್ಥಾನ..?
ಪಾಗಲ್ ಪ್ರೇಮಿ ಪ್ರಕಾಶ್ ಅದೇ ಆಸ್ಪತ್ರೆಯ ಕಾಲೋನಿಯಲ್ಲಿ ವಾಸವಿದ್ದನು. ನಿತ್ಯವೂ ನರ್ಸ್ನ್ನು ಹಿಂಬಾಲಿಸುವುದು, ಮದುವೆ ಆಗುವಂತೆ ಪೀಡಿಸುವುದು ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಕುಟುಂಬಸ್ಥರನ್ನು ಕರೆದುಕೊಂಡು ನರ್ಸ್ ಮನೆಗೆ ಹೋಗಿ ಸಂಬಂಧ ಕೇಳಿದ್ದ. ಆದರೆ ಈ ವೇಳೆ ಆ ಯುವತಿ ಕುಟುಂಬಸ್ಥರು ಸಂಬಂಧ ನಿರಾಕರಿಸಿದ್ದರು. ಆದರೆ ಇದಾದ ಬಳಿಕವೂ ಮತ್ತೆ ಮದುವೆ ಆಗುವಂತೆ ಪೀಡಿಸುತ್ತಿದ್ದ. ಇದಕ್ಕೆ ನರ್ಸ್ ಸ್ಪಂದಿಸದಿದ್ದಾಗ ಆಸ್ಪತ್ರೆಗೆ ನುಗ್ಗಿ ಮೆಚ್ಚಿನಿಂದ ಹಲ್ಲೆ ಮಾಡಿದ್ದಾನೆ. ನರ್ಸ್ ಕೊನೆವರೆಗೂ ಆತನೊಂದಿಗೆ ಹೋರಾಟ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್ 30ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಖಡೇಬಜಾರ್ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.