ಬೆಂಗಳೂರು: ನಾಗಿನಿ ಸೀರಿಯಲ್ ಖ್ಯಾತಿ ನಟಿ ದೀಪಿಕಾ ದಾಸ್ ತಾಯಿಗೆ ಕಿಡಿಗೇಡಿಯೊಬ್ಬ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕಿರುತೆರೆ ನಟಿ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಇರುವ ದೀಪಿಕಾ ದಾಸ್ ನಿವಾಸಕ್ಕೆ ಕಿಡಿಗೇಡಿಗಳು ಮಧ್ಯರಾತ್ರಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
Puri without using oil: ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು.! ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್
ಜೊತೆಗೆ ಬೆದರಿಕೆ ಕೂಡ ಹಾಕಿದ್ದಾರೆ. ಸದ್ಯ ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಟಿ ದೀಪಿಕಾ ದಾಸ್ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದ ನಟಿ. ಇವರ ನಟನೆಯ ನಾಗಿನಿ ಸೀರಿಯಲ್ ಸಖತ್ ಫೇಮಸ್ ಆಗಿತ್ತು. ಆ ಮೇಲೆ ಬಿಗ್ಬಾಸ್ಗೆ ಹೋದ ನಟಿ ಅಲ್ಲೂ ಸದ್ದು ಮಾಡಿದ್ದರು. ಬಿಗ್ ಬಾಸ್’ ಸೀಸನ್ 9 ಶೋ ಮುಗಿದ ಮೇಲೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಿದ್ದರೂ ಅದೇನು ಅಂಥಾ ಹೆಸರು ತರಲಿಲ್ಲ.