ಬೆಂಗಳೂರು: ಅದು ಬಿಹಾರ ಮೂಲದ ಖತರ್ನಾಕ್ ಗ್ಯಾಂಗ್.. ಬೆಂಗಳೂರಿನಲ್ಲಿ ತಮ್ಮ ಕೈಚಳಕ ತೋರಿಸಲು ಬೀಡು ಬಿಟ್ಟಿತ್ತು. ಅಂದುಕೊಂಡಂತೆ ಒಂದು ಅಂಗಡಿಯನ್ನೂ ದೋಚಿದ್ರು. ಆದ್ರೆ ಅವರ ನಸೀಬು ಅಲ್ಲಿಗೆ ಮುಗಿದಿತ್ತು. ಖತರ್ನಾಕ್ ಬೆಡ್ ಶೀಟ್ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ. ಅಬ್ಬಬ್ಹಾ.. ಇಬ್ಬರು ಬೆಡ್ ಶೀಟ್ ಹಿಡಿದ್ರೆ.. ಉಳಿದವರು ಅಂಗಡಿ ಒಳಗೆ ನುಗ್ಗೋದಂತೆ.. ಮತ್ತಿಬ್ಬರು ಬೀದಿಯಲ್ಲೇ ವಾಚ್ ಮಾಡುದ್ರೆ, ಎಲ್ಲಾ ಮುಗಿದ್ಮೇಲೆ ಮತ್ತೆ ಇಬ್ಬರು ಬೆಡ್ ಶೀಡ್ ಹಿಡಿಯೋದಂತೆ… ಅಬ್ಬಬ್ಬಾ… ಅದೇನ್ ಪ್ಲಾನ್. ಅದೆಂತ ಸ್ಟಾಟರ್ಜಿ.. ಬೆಂಗಳೂರಿನಲ್ಲಿ ಇಂತ ಖತರ್ನಾಕ್ ಕಳ್ಳತನ ಮಾಡಿದ್ದ ಬೆಡ್ ಶೀಟ್ ಗ್ಯಾಂಗ್ ಈಗ ಅಂದರ್ ಆಗಿದೆ..
ಯೆಸ್.. ಸಿಸಿಟಿವಿಯಲ್ಲಿ ಸೆರೆಯಾಗಿರೋ ಈ ಘಟನೆ ನಡೆದಿದ್ದು ಅಕ್ಟೋಬರ್ 21ರ ಸೂರ್ಯ ಉದಯಿಸೋ ಮುನ್ನ. ಸರಿಯಾಗಿ ಮುಂಜಾನೆ 4-5 ಗಂಟೆ ಒಳಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ವಿ.ರಾಮನ್ ನಗರದ ಈ ಎಸ್ಎಲ್ಆರ್ ಮೊಬೈಲ್ ಶಾಪ್ ಬೆಡ್ ಶೀಟ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. 8 ಜನರ ಈ ಟೀಂ ಎರಡು ದಿನದ ಹಿಂದೆಯೇ ಅಂಗಡಿಗೆ ಭೇಟಿ ಕೊಟ್ಟು ಅಂಗಡಿಯ ಇಂಚಿಂಚನ್ನೂ ಮೈಂಡ್ ನಲ್ಲೇ ನೋಟ್ ಮಾಡಿಕೊಂಡಿತ್ತು.
Puri without using oil: ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು.! ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್
ಬಳಿಕ ಪಕ್ಕಾ ಪ್ಲಾನ್ ಮಾಡಿಕೊಂಡು ಅಂಗಡಿ ಬಳಿ ಬಂದು ಯಾರಾದ್ರೂ ಓಡಾಡ್ತಿದ್ದಾರಾ ಅಂತ ವಾಚ್ ಮಾಡಿತ್ತು. ಯಾರು ಇಲ್ಲ ಅಂತ ಕನ್ಫರ್ಮ್ ಮಾಡಿಕೊಂಡು ಪ್ಲಾನ್ ಎಕ್ಸಿಕ್ಯೂಟಿವ್ ಮಾಡಿತ್ತು. ಅದರಂತೆ ತಾವೇನು ಮಾಡ್ತಿದ್ದೀವಿ ಅಂತ ದಾರಿಯಲ್ಲಿ ಯಾರಿಗೂ ಗೊತ್ತಾಗ್ ಬಾರದು ಅಂತ ಇಬ್ಬರು ಅಂಗಡಿ ಮುಂದೆ ನಿಂತು ಬೆಡ್ ಶೀಟ್ ಹಿಡಿದ್ರು. ತಕ್ಷಣವೇ ನಾಲ್ಕೈದು ಜನ ಬೆಡ್ ಶೀಟ್ ಹಿಂದೆ ಸೇರಿ ಮೊಬೈಲ್ ಶಾಪ್ ನ ಶೆಲ್ಟರ್ ಮೀಟಿ ಒಳನುಗ್ಗಿದ್ರು..
ಹೀಗೆ ಅಂಗಡಿ ಒಳಗೆ ನುಗ್ಗಿದವರು 1.4 ಲಕ್ಷ ಕ್ಯಾಶ್ ಜೊತೆ 28 ಲಕ್ಷ ಮೌಲ್ಯದ ಮೊಬೈಲ್ ಫೋನ್ ಗಳನ್ನ ದೋಚಿದ್ರು. ಬಳಿಕ ಮತ್ತದೆ ಪ್ಲಾನ್ ನಂತೆ ಇಬ್ಬರು ಬೆಡ್ ಶೀಟ್ ಹಿಡಿದು ಅಂಗಡಿ ಕವರ್ ಮಾಡ್ದಾಗ ಎಲ್ಲರೂ ಹೊರಗಡೆ ಬಂದು ಎಸ್ಕೇಪ್ ಆಗಿದ್ರು. ಇಂತ ಖತರ್ನಾಕ್ ಟೀಂ ಹುಡುಕಿ ಹೊರಟ ಬೈಯಪ್ಪನಹಳ್ಳಿ ಪೊಲೀಸರು ಬೇಗೂರು ಬಳಿ ಮನೆಯಲ್ಲಿ ವಾಸವಿದ್ದ ಮನೆಯಲ್ಲಿ ಇಮ್ತಿಯಾಜ್ ಆಲಂ, ಜಾವೇದ್ ಆಲಮ್, ಪವನ್ ಷಾ, ಮುನೀಲ್ ಕುಮಾರ್, ರಿಜ್ವಾನ್ ದೇವನ್, ಸಲೀಂ ಆಲಂ, ರಾಮೇಶ್ವರ ಗಿರಿ, ಸೂರಜ್ ಕುಮಾರ್ ರನ್ನ ಹೆಡೆಮುರಿ ಕಟ್ಟಿದ್ದಾರೆ..
ಅಂದ್ಹಾಗೆ ಬಿಹಾರ ಮೂಲದ ಈ ಚಾದರ್ ಗ್ಯಾಂಗ್ ಆರೋಪಿಗಳದ್ದು ಬೆಂಗಳೂರಿನಲ್ಲಿ ಇದೇ ಮೊದಲ ಕಳ್ಳತನ.. ಆದರೆ ಮೊದಲ ಕೇಸ್ ನಲ್ಲೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.. ಇನ್ನೂ ಪ್ರಕರಣದ ಪ್ರಮುಖ ಆರೋಪಿ ಕದ್ದ ಮಾಲ್ ಗಳ ಜೊತೆ ನೇಪಾಳಕ್ಕೆ ಎಸ್ಕೇಪ್ ಆಗಿದ್ದು ಆತನಿಗೆ ಹುಡುಕಾಟ ನಡೀತಿದೆ.. ಸದ್ಯ ಪೊಲೀಸರ ಆಪರೇಷನ್ ಚಾದರ್ ಗ್ಯಾಂಗ್ ಸಕ್ಸಸ್ ಆಗಿರೋದ್ರಿಂದ ಮತ್ತಷ್ಟು ಅಂಗಡಿಗಳ ಕಳ್ಳತನ ಆಗೋದು ತಪ್ಪಿದೆ. ಆದರೆ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಗಳನ್ನ ಕಳೆದುಕೊಂಡ ಅಂಗಡಿ ಮಾಲೀಕ ಕಂಗಾಲಾಗಿದ್ದಾನೆ..