ಕೊಪ್ಪಳ: ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ರೆಸಾರ್ಟ್ ಮಾಲೀಕರ ವಿರುದ್ಧ ಎಫ್ಐಆರ್ಗೆ ಆದೇಶ ಹೊರಡಿಸಿದ್ದಾರೆ.
ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ಜ್ಯೋತಿಕಾ, ಸೂರ್ಯ ದಂಪತಿ
ತುಂಗಭದ್ರಾ ನದಿ ಪಾತ್ರ ಮತ್ತು ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಕೊಪ್ಪಳ ತಾಲೂಕಿನ ವ್ಯಾಪ್ತಿಯ 2 ರೆಸಾರ್ಟ್ಗೆ ಮತ್ತೆ ಕುತ್ತು ಬಂದಿದೆ. ತಪ್ಪಿತಸ್ಥ ರೆಸಾರ್ಟ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಸೂಚಿನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಆದೇಶಕ್ಕೆ ತಾವೇ ತಡೆ ನೀಡಿದ್ದ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಪ್ರಾದೇಶಿಕ ಆಯುಕ್ತರ ಆದೇಶದಿಂದ ಮುಖ ಭಂಗವಾಗಿದೆ.
ತಾಲೂಕಿನ ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಗ್ರಾಮ ವ್ಯಾಪ್ತಿಯ 3 ರೆಸಾರ್ಟ್ನ ಒತ್ತುವರಿ ತೆರವು ಮಾಡುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಕೊಪ್ಪಳ ಜಿಲಾಧಿಕಾರಿಗೆ ಸೂಚನೆ ನೀಡಿದ್ದಾರೆ.