ಶಿರಸಿ:- ಶಿರಸಿ ಪ್ರಯಾಣಿಕರು ನೋಡಲೇಬೇಕಾದ ಸ್ಟೋರಿ. ಡಿ 2 ರಿಂದ ಫೆ. 25ರವರೆಗೆ ಕುಮಟಾ- ಶಿರಸಿ ರಸ್ತೆ ಸಂಚಾರ ಬಂದ್ ಇರಲಿದೆ.
ಎಸ್ಪಿ ಎಂ. ನಾರಾಯಣ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಹೀಗಾಗಿ, ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೇರೆ ಮಾರ್ಗದಲ್ಲಿ ಸಂಚರಿಸುವುದು ಉತ್ತಮ.
ಜಿಲ್ಲಾಧಿಕಾರಿಯಾದ ಲಕ್ಷ್ಮೀಪ್ರಿಯಾ ಅವರ ಸೂಚನೆ ಮೇರೆಗೆ ಎಸ್ಪಿ ನಾರಾಯಣ ಈ ಕ್ರಮ ಕೈಗೊಂಡಿದ್ದಾರೆ. ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ 766Eನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗುವುದು. ಶಿರಸಿ-ಕುಮಟಾ ಪ್ರಯಾಣಿಕರಿಗೆ ಸಿದ್ದಾಪುರ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
ಹಾಗೇ, ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63ಯಲ್ಲಿ ಸಂಚರಿಸಬಹುದು. ಹಾಗೂ ರಾಜ್ಯ ಹೆದ್ದಾರಿ 93ರಲ್ಲಿ ಎಲ್ಲ ಮಾದರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶವಿದೆ