ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರಾವಾಹಿ ಮುಗಿದು ಹಲವು ತಿಂಗಳೇ ಕಳೆದು ಹೋಗಿದೆ. ಆದರೆ ಅಲ್ಲಿನ ಕಲಾವಿದರನ್ನು ಮಾತ್ರ ಯಾರು ಮರೆತಿಲ್ಲ. ಈ ಧಾರವಾಹಿ ಮೂಲಕ ಹಲವು ನಟ, ನಟಿಯರು ಖ್ಯಾತಿ ಗಳಿಸಿದ್ದಾರೆ.
ಗಟ್ಟಿಮೇಳ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟಿ ಎಂದರೆ ಅದು ಆರತಿ ಪಾತ್ರಧಾರಿ. ಇದೇ ಆರತಿ ಪಾತ್ರದಲ್ಲಿ ಅಭಿನಯಿಸಿದ್ದು ನಟಿ ಅಶ್ವಿನಿ ಸೀರಿಯಲ್ನಿಂದ ಆಚೆ ಬಂದ ಮೇಲೆ ಯೂಟ್ಯೂಬ್ನಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹೆಚ್ಚು ಹೆಚ್ಚು ಹತ್ತಿರವಾಗಿದ್ದಾರೆ.
ಆದರೆ ಇದೀಗ ನಟಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ತಿಳಿಸಿದ್ದಾರೆ. ಇಷ್ಟು ದಿನ ತಾವು ಮದುವೆಯಾದ ವಿಚಾರವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರು. ಅವರ ಕುಟುಂಬಸ್ಥರಿಗೆ ಬಿಟ್ಟು ಉಳಿದಂತೆ ಯಾರಿಗೂ ಗೊತ್ತಿರಲಿಲ್ಲ. ಬದಲಾಗಿ ಅವರು ಅಷ್ಟಾಗಿ ವೈಯಕ್ತಿಕ ವಿಚಾರವನ್ನು ಎಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನಟಿ ತಾವು ಮದುವೆಯಾದ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯಾದ ಫೋಟೋಗಳನ್ನು ಶೇರ್ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಆ ಫೋಟೋಗಳ ಜೊತೆಗೆ ಎಲ್ಲರಿಗೂ ನಮಸ್ಕಾರ ನನ್ನ ಜೀವನದ ಬಹು ಮುಖ್ಯವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮತ್ತು ಅಜಯ್ ಅವರು ಪ್ರೀತಿಸಿ 15 ವರ್ಷಗಳಾಗಿವೆ. 27/11/2024 ಇಂದು ನಾವು ಮದುವೆಯಾದ ದಿನ ಅಂದರೆ ಮದುವೆಯ ವಾರ್ಷಿಕೋತ್ಸವ. ನಮ್ಮದು love come Arrange Marriage. ನಾನು ಮದುವೆಯಾಗಿರುವ ವಿಷಯ ನನ್ನ ಆತ್ಮೀಯರಿಗೆ ತಿಳಿದಿದೆ. ಆದರೆ ಈ ವಿಷಯವನ್ನು ನಾನು public ಮಾಡಿರಲಿಲ್ಲ ಅಷ್ಟೇ, ಇಂದು ಆ ಸಮಯ ಬಂದಿದೆ ಹಾಗಾಗಿ ತಿಳಿಸುತ್ತಿದ್ದೇನೆ. ಇಲ್ಲಿ ನಾನು ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ ಹಾಗಾಗಿ ಇದರ ಸಂಪೂರ್ಣ ಮಾಹಿತಿ Nimma Ashwini YouTube channelನಲ್ಲಿ ಇದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುವ ಅಜಯ್ ಮತ್ತು ಅಶ್ವಿನಿ ಅಂತ ಬರೆದುಕೊಂಡಿದ್ದಾರೆ.
ಸದ್ಯ ನಟಿ ಅಶ್ವಿನಿ ಅವರು ಶೇರ್ ಮಾಡಿಕೊಂಡ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನೂ ನಟಿ ಈ ವಿಚಾರವನ್ನು ಹೇಳಿಕೊಳ್ಳಲು ಒಂದು ಕಾರಣ ಕೂಡ ಇದೆ. ಅದು ಏನೆಂದರೆ, ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರಂತೆ, ನೀವು ಒಬ್ಬರೇ ಇರೋದಾ, ನಿಮಗೆ ಫ್ಯಾಮಿಲಿ ಇಲ್ವಾ? ನೀವು ಏಕೆ ಇನ್ನೂ ಮದುವೆ ಆಗಿಲ್ಲ, ಮದುವೆ ಆದರೂ ಏಕೆ ನೀವು ಪ್ರೈವೇಟ್ ಆಗಿ ಇಟ್ಟುಕೊಂಡಿದ್ದೀರಾ ಎಂಬೆಲ್ಲಾ ಕಾಮೆಂಟ್ಸ್ಗಳು ನಟಿಗೆ ಬರ್ತಾ ಇತ್ತಂತೆ.
ಹೀಗಾಗಿ ನಟಿ ಈಗ ಖುದ್ದಾಗಿ ಅವರೇ ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಪತಿ ಬಗ್ಗೆ ನಟಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿರುವ ನಟಿ ಅಜಯ್ ಎಷ್ಟು ಸಪೋರ್ಟಿವ್ ಆಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.