ಹುಬ್ಬಳ್ಳಿ: ವೈಯಕ್ತಿಕ ದ್ವೇಷ ವಿಚಾರವಾಗಿ ಢಾಬಾದ ಮಾಲಿಕ ಮತ್ತು ವೇಟರ್ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇರೆಗೆ ಬೆಂಡಿಗೇರಿ ಠಾಣೆಯ ಪೇದೆಯನ್ನು ಹು-ಧಾ. ಪೊಲೀಸ್ ಆಯುಕ್ತರು ಅಮಾನತು ಗೊಳಿಸಿದ್ದಾರೆ.
BBK11: ಮೋಕ್ಷಿತಾ ಮುಂದೆ ತಲೆ ತಗ್ಗಿಸಲ್ಲ ಎಂದ ಗೌತಮಿ: ಉಗ್ರಂ ಮಂಜು ಯೋಗ್ಯತೆ ಬಗ್ಗೆ ಕೆಣಕಿದ ಯುವರಾಣಿ!
ಬೆಂಡಿಗೇರಿ ಠಾಣೆಯ ಕಾನ್ಸ್ಟೇಬಲ್, ತಾಲೂಕಿನ ಬಂಡಿವಾಡ ಗ್ರಾಮದ ವಿರೂಪಾಕ್ಷ ಅಳಗವಾಡಿ ಎಂಬುವರೆ ಅಮಾನತು ಗೊಂಡವರು.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪೇದೆ ಅಳಗವಾಡಿ ತನ್ನ ಸ್ನೇಹಿತನೊಂದಿಗೆ ತಾಲೂಕಿನ ಬಂಡಿವಾಡ ಗ್ರಾಮ ಬಳಿಯ ಪ್ರೀತಿ ಢಾಬಾದ ಮಾಲಿಕ, ಗ್ರಾಪಂ ಮಾಜಿ ಅಧ್ಯಕ್ಷ ಹನಮಂತ ಹುಚ್ಚನವರ ಹಾಗೂ ವೇಟರ್ಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯಾವಳಿಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವೈಯಕ್ತಿಕ ದ್ವೇಷ ಹಿನ್ನೆಲೆ ಗಲಾಟೆ ಮಾಡಿಕೊಂಡ ಹಾಗೂ ಈ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೇದೆ ವಿರೂಪಾಕ್ಷ ಅಳಗವಾಡಿಯನ್ನು ಅಮಾನತು ಗೊಳಿಸಲಾಗಿದೆ ಎಂದು ಹು-ಧಾ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.