ಪೀಣ್ಯ ದಾಸರಹಳ್ಳಿ: ವಾಣಿಜ್ಯ ಮಳಿಗೆಗಳು, ಹೋಟೆಲ್, ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಸಂಪೂರ್ಣ ಅಕ್ರಮಣವಾಗಿದ್ದು ,ನಾಗರೀಕರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದು ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ತೆರವುಗೊಳಿಸುವಂತೆ ಎಂಇಐ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಮುಖಂಡ ಲಕ್ಷ್ಮಣ್ ಗೌಡ್ರು ಅಗ್ರಹಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಎಂಇಐ ಲೇಔಟ್ ರಸ್ತೆಯಲ್ಲಿ ನೂರಾರು ವಾಣಿಜ್ಯ ಮಳಿಗೆಗಳಿದ್ದು ಭಾಗಶಃ ಪಾದಚಾರಿ ಮಾರ್ಗ ಸಂಪೂರ್ಣ ಅಕ್ರಮಣವಾಗಿದ್ದು ಅದನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಮಾಲೀಕರಿಗೆ ಎಂಇಐ ಲೇಔಟ್ ಕ್ಷೇಮಾಭಿವೃದ್ದಿ ಸಂಘದ ಮುಖಂಡರಾದ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದರು.
ಇತ್ತೀಚಿಗಷ್ಟೆ ಎಂಇಐ ಗ್ರೌಂಡ್ ನ ಮುಂಭಾಗ ಹೊಸದಾಗಿ ಬಿರಿಯಾನಿ ಸೆಂಟರ್ ಅರಂಭವಾಗಿದ್ದು ರಸ್ತೆಯ ಬದಿಯಲ್ಲಿ
ವ್ಯಾಪಾರ ನೆಡೆಸುತ್ತಿದ್ದು ರಸ್ತೆಯಲ್ಲಿ ನಿಂತು ತಿಂದು ಮೂಳೆ ಬಿಸಾಕುತ್ತಿರುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜನಗಳ ಮೇಲೆ ಅಕ್ರಮಣ ಮಾಡುತ್ತಿವೆ ಹಾಗೂ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಪಿಕ್ ಉಂಟಾಗಿತ್ತಿದೆ ಸಭ್ಯಸ್ಥರು ಮಹಿಳೆಯರು ,ಮಕ್ಕಳು ಓಡಾಡದಂತಹ ಪರಿಸ್ಥಿತಿ ಉಂಟಾಗಿದ್ದು ಮಾಲೀಕರಿಗೆ ತಿಳಿಸಿದರೆ,ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕೂಡಲೇ ಬಿಬಿಎಂಪಿ ಎಚ್ಚೆತ್ತು ಈ ರಸ್ತೆಯಲ್ಲಿರುವ ಎಲ್ಲಾ ಒತ್ತುವರಿದಾರರನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕೆಂದರು.
ಮುಖಂಡ ಚಂದ್ರಪ್ಪ ಮಾತಾನಾಡಿ ಈ ರಸ್ತೆ ಹಲವಾರು ಬಡಾವಣೆಗಳಿಗೆ ಹಾದುಹೋಗಲಿದ್ದು ಸಹಜವಾಗಿಯೇ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಅಂತಹುದರಲ್ಲಿ ಅಂಗಡಿ ಮಾಲೀಕರು ಪುಟ್ ಪಾತ್ ಅಕ್ರಮಿಸಿ ರಸ್ತೆಯಲ್ಲಿ ಪದಾರ್ಥಗಳನ್ನು ಇಡುವುದರಿಂದ ಸಹಜವಾಗಿ ರಸ್ತೆ ಕಿರಿದಾಗಿ ವಾಹನ ಓಡಾಡಲು ತೊಂದರೆಗೆ ಕಾರಣವಾಗುತ್ತಿದೆ. ಕೂಡಲೇ ಸಂಭಂಧಪಟ್ಟವರು ಪುಟ್ ಪಾತ್ ಅಕ್ರಮಿಸಿರುವವರನ್ನು ತೆರವುಗೊಳಿಸಿ ಆಗುತ್ತಿರುವ ಅನಾನುಕೂಲ ನಿವಾರಿಸಬೇಕೆಂದರು.