ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ಬಹಳ ಜನಮನ್ನಣೆ ಪಡೆದಿದೆ. ಅದರಲ್ಲೂ ಜಾಹ್ನವಿ ಪಾತ್ರ ಹಾಗೂ ಸೈಕೋ ಪಾತ್ರದಲ್ಲಿ ಜಯಂತ್ ಅವರ ಪಾತ್ರ ವೀಕ್ಷಕರಿಗೆ ಬಹಳ ಮನರಂಜನೆ ಕೊಟ್ಟಿದೆ.
ಕಥೆಯಲ್ಲಿ ಚಿನ್ನುಮರಿ ಬಿಟ್ಟಿರದ ಜಯಂತ್, ಯಾರೇ ಅವರ ಹತ್ತಿರ ಮಾತಾಡಿದ್ರೂ ಸಹಿಸೋದಿಲ್ಲ. ಆದರೆ ಇದೀಗ ಚಿನ್ನುಮರಿ ಬೇರೊಂದು ಹುಡುಗನ ಜೊತೆ ವೇದಿಕೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
IPL 2025: ಮ್ಯಾಕ್ಸಿ ಮ್ಯಾಜಿಕ್ ಮರೆತುಬಿಡ್ತಾ RCB!? ಸ್ಟಾರ್ ಆಲ್ರೌಂಡರ್ ಬಿಟ್ಟು ಎಡವಟ್ಟು ಮಾಡಿಕೊಂಡ ಪ್ರಾಂಚೈಸಿ!
ಅರೆ ಮರ್ರೆ ಇದು ಅವರ ರೀಲ್ ಲೈಫ್ ಅಲ್ಲ. ರಿಯಲ್ ಲೈಫ್. ಜಾಹ್ನವಿ ಪಾತ್ರದಲ್ಲಿ ಅಭಿನಯಿಸ್ತಿರೋ ಚಂದನಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದು ಪಕ್ಕಾ ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರು ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28 ಅಂದರೆ ನಾಳೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ.
ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಚಂದನಾ ಖುಷಿಯಲ್ಲಿ ಲಕ್ಷ್ಮೀ ನಿವಾಸ ತಂಡ ಕೂಡ ಜೊತೆಯಾಗಿದೆ. ಮಾನಸಾ ದಂಪತಿ, ದಿಶಾ ಮದನ್ ದಂಪತಿ, ನಟ ಮಧು, ಕ್ಲೋಸ್ ಫ್ರೆಂಡ್ ನಯನಾ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಆತ್ಮಿಯರು ಭಾಗಿಯಾಗಿದ್ರು.
ಇನ್ನೂ, ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರುನಿವರು. Mtech ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ.
ಪ್ರತ್ಯಕ್ಷ್ ತಂದೆ ಉದಯ್ ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ನಟ ಉದಯ್ ಹುತ್ತಿನಗದ್ದೆ ಅವರು ‘ಆರಂಭ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.