ಸಾಮಾನ್ಯವಾಗಿ ನಿದ್ರೆಯನ್ನು 7-8 ಗಂಟೆಗಳು ಮಾಡಬೇಕು ಎಂದು ಹೇಳಲಾಗುತ್ತದೆ. ಪ್ರತಿ ಮನುಷ್ಯನು ಕನಿಷ್ಠ 7 ಗಂಟೆಯಾದರೂ ಮಾಡಬೇಕು. ಮೆದುಳು, ದೇಹಕ್ಕೆ ವಿಶ್ರಾಂತಿ ನೀಡಲು ನಿದ್ರೆ ಮನುಷ್ಯನಿಗೆ ಅತ್ಯವಶ್ಯಕ ಎಂದು ವೈದ್ಯರು ಸಹ ಹೇಳುತ್ತಾರೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಆರೋಗ್ಯ ಆರಾಮಾದಾಯಕವಾಗಿ ಇರಲು ನಿದ್ರೆ ಮುಖ್ಯ.
ಚಳಿಗಾಲದಲ್ಲಿ ಬಾದಾಮಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ! ಅಚ್ಚರಿ ಸಂಗತಿ ಇಲ್ಲಿದೆ!
ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ನಿದ್ರೆ ಜಾಸ್ತಿಯಂತೆ. ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಮಹಿಳೆಯರ ಮಿದುಳು ಸಂಕೀರ್ಣವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ 20 ನಿಮಿಷ ಹೆಚ್ಚಿಗೆ ನಿದ್ರೆ ಬೇಕು ಮತ್ತು ಮಹಿಳೆಯರ ಮಿದುಳು ಹಗಲು ಹೊತ್ತಿನಲ್ಲಿ ಕಠಿಣವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಹಾಗಾದರೆ ಯಾಕೆ ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ
ಅಧ್ಯಯನದಲ್ಲಿ ಭಾಗಿಯಾಗಿರುವ ಸಂಶೋಧಕರ ವರದಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರು ವಿಭಿನ್ನ ನಿದ್ರೆಯ ಮಾದರಿಗಳನ್ನು ಹೊಂದಿದ್ದಾರೆ. ಪ್ರಾಣಿಗಳಲ್ಲಿ ನಿದ್ರೆಯ ಮಾದರಿಗಳನ್ನು ಸಂಶೋಧಿಸುವುದು ಇತ್ತೀಚಿನ ವರ್ಷಗಳಲ್ಲಿ ಒಂದು ಪ್ರವೃತ್ತಿಯಾಗಿದೆ. ಈ ಕ್ರಮದಲ್ಲಿ, ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಇದು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ. ಅದಲ್ಲದೆ ಮಧುಮೇಹ, ಬೊಜ್ಜು, ಅಲ್ಝೈಮರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಧ್ಯಯನದಲ್ಲಿ ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ಗಳನ್ನು ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಸಂಶೋಧನೆ ನಡೆಸಲಾಯಿತು. 24 ಗಂಟೆಗಳಲ್ಲಿ, ಗಂಡು ಇಲಿಗಳು ಸುಮಾರು 670 ನಿಮಿಷಗಳ ಕಾಲ ಮಲಗಿದವು. ಆದರೆ ಹೆಣ್ಣು ಇಲಿಗಳು ಒಂದು ಗಂಟೆಗಿಂತಲೂ ಕಡಿಮೆ ಸಮಯ ನಿದ್ರೆ ಮಾಡುತ್ತವೆ ಎಂದು ಅವರು ಕಂಡುಕೊಂಡರು. ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು, ಸ್ತ್ರೀ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ. ಇದು ನಿದ್ರೆಗೆ ಭಂಗ ತರಬಹುದು. ಅಲ್ಲದೆ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ವರದಿ ಮಾಡಿದೆ.
ಅಧ್ಯಯನದಲ್ಲಿ ಕಂಡು ಬಂದಂತೆ ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಗಮನಿಸಿದ್ದು, ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ತೊಂದರೆ ಉಂಟುಮಾಡಿ, ಭಂಗ ತರಬಹುದು. ಅದಲ್ಲದೆ ಈ ಸಮಯದಲ್ಲಿ, ಮಹಿಳೆಯರಲ್ಲಿ ಸೆಳೆತ, ಹೊಟ್ಟೆನೋವು ಮತ್ತು ಬೆವರುವಿಕೆಯ ಜೊತೆಗೆ ಕೆಲವು ಅಹಿತಕರ ದೈಹಿಕ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ, ಅದು ನಿದ್ರೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಇದೇ ರೀತಿಯ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ ಬಳಲುತ್ತಾರೆ ಎಂದು ಅಧ್ಯಯನ ತಿಳಿಸಿದೆ.