ಬೆಂಗಳೂರು: ಇತ್ತೀಚೆಗೆ ಶಾಲಾ-ಕಾಲೇಜು, ಹೋಟೆಲ್, ಏರ್ಪೋರ್ಟ್ಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರಿಯ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯ ನಡುಕ ಉಂಟಾಗಿದೆ.
ಬೆಂಗಳೂರಿನ ಚ್ಎಸ್ಬಿಸಿ ಬ್ಯಾಂಕ್ನ ಎಂಜಿ ರಸ್ತೆ ಶಾಖೆಯಲ್ಲಿ ಬಾಂಬ್ ಬೆದರಿಕೆ ಬಂದಿದೆ. ಬ್ಯಾಂಕ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಬದರಿಸುವ ಇಮೇಲ್ವೊಂದನ್ನು ಬ್ಯಾಂಕ್ಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗು ಗ್ರಾಹಕರನ್ನು ಹೊರ ಕಳುಹಿಸಲಾಯಿತು. ಹಲಸೂರು ಠಾಣೆಯ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
PM Usha Scholarship: PUC ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹20,000 ಆರ್ಥಿಕ ನೆರವು.! ಇಂದೇ ಅರ್ಜಿ ಸಲ್ಲಿಸಿ
ಇತ್ತೀಚೆಗೆ ಬೆಂಗಳೂರಿನ ಅಶೋಕ್ ನಗರದಲ್ಲಿರುವ ಸೈನಿಕ ಶಾಲೆಗೂ ಇಂತಹುದೇ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಶಾಲೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಇಂತಹ ಘಟನೆಗಳು ಇದೇ ಮೊದಲಲ್ಲ, ಹಲವಾರು ಬಾರಿ ನಡೆದಿವೆ. ಆದರೆ, ಇನ್ನೂವರೆಗೂ ಕಿಡಿಗೇಡಿಗಳು ಮಾತ್ರ ಪತ್ತೆಯಾಗಿಲ್ಲ.