ಬೆಳಗಾವಿ: ಸಿದ್ದರಾಮಯ್ಯ ಹೊಡೆತಕ್ಕೆ ಇವರು ಶೇಕ್ ಶೇಕ್ ಆಗುತ್ತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಕೇಸ್ ಸಿಬಿಐಗೆ ನೀಡಿದರೂ ಕಷ್ಟ ಆಗಲ್ಲ, ಜಾರಿ ನಿರ್ದೇಶನಾಲಯಕ್ಕೆ ನೀಡಿದರೂ ಕಷ್ಟ ಆಗಲ್ಲ.ಇದೆಲ್ಲ ರಾಜಕೀಯ ಪ್ರೇರಿತವಾಗಿದೆ.ಸಿದ್ದರಾಮಯ್ಯ ಹೊಡೆತಕ್ಕೆ ಇವರು ಶೇಕ್ ಶೇಕ್ ಆಗುತ್ತಿದ್ದಾರೆ. ಸಿದ್ದರಾಮಯ್ಯರನ್ನ ಕುಗ್ಗಿಸಲು ಕೇಸ್ ಹಾಕುತ್ತಿದ್ದಾರೆ. ಈ ಕೇಸ್ಗಳಿಗೆ ನಾವು ಹೆದರಲ್ಲ ಎಂದರು.
PM Usha Scholarship: PUC ಪಾಸಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹20,000 ಆರ್ಥಿಕ ನೆರವು.! ಇಂದೇ ಅರ್ಜಿ ಸಲ್ಲಿಸಿ
ವಕ್ಫ್ ಬಗ್ಗೆ ಮಾತನಾಡುವ ಇವರು 2019-20ನೇ ಸಾಲಿನಲ್ಲಿ ಇವರು ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ನನ್ನ ಹತ್ತಿರ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟಿದ್ದು ಯಾರು? ರೈತರ ಒಕ್ಕಲೆಬ್ಬಿಸಿದ್ಯಾರು? ಬಿಜೆಪಿಯವರೇಈಗ ರೈತರ ವಿಚಾರದಲ್ಲಿ ಕೇಸರಿ ಟವಲ್ ಹಾಕಿ ಊರುರು ಅಡ್ಡಾಡಿದ್ರೆ ಜನಕ್ಕೆ ಗೊತ್ತಾಗಲ್ವಾ?ಇವರದ್ದು ನಾಟಕ ಕಂಪನಿ ಎಂದು ವಾಗ್ದಾಳಿ ನಡೆಸಿದರು.