ಬಿಜೆಪಿಯೊಳಗಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೊ ಜೋರಾಗ್ತಿದೆ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ vs ಯತ್ನಾಳ್ ಹಾಗೂ ಟೀಂ ನಡುವಿನ ಕೋಲ್ಡ್ ವಾರ್ ತಾರಕ್ಕೇರ್ತಿದೆ. ಉಪಚುನಾವಣೆ ಸೋಲಿನಿಂದ ಕಂಗೆಟ್ಟಿರೋ ಬಿಜೆಪಿ ಕಾರ್ಯಕರ್ತರಿಗೆ ಪತ್ರದ ಮೂಲಕ ವಿಜಯೇಂದ್ರ ಧೈರ್ಯ ತುಂಬಿದ್ದಾರೆ, ಯತ್ನಾಳ್ ವಿಚಾರವಾಗಿ ಸೈಲೆಂಟ್ ಆಗಿದ್ದ ಬಿಎಸ್ವೈ ತಿರುಗಿಬಿದ್ದಿದ್ದು ವಾರ್ನಿಂಗ್ ಕೊಟ್ಟಿದ್ದಾರೆ..
ಸಾಮಾನ್ಯವಾಗಿ ಆಡಳಿತ ಪಕ್ಷದಲ್ಲಿ ಬಣ ಬಡಿದಾಟ ಹೆಚ್ಚಾಗಿರುತ್ತೆ ಆದ್ರೆ ಕರ್ನಾಟಕದಲ್ಲಿ ಡಿಫರೆಂಟ್ ವಿಪಕ್ಷ ಬಿಜೆಪಿ ಮೊನೆಯೊಂದು ಮೂರು ಬಾಗಿಲಾಗಿದೆ. ಬಿಜೆಪಿಯಲ್ಲಿರೋ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಟಾಕ್ ವಾರ್ ನಲ್ಲಿರುತ್ವೆ ಅದ್ರಲ್ಲೂ ಸದ್ಯ ವಕ್ಫ್ ವಿಚಾರವನ್ನು ಮುಂದಿಟ್ಕೊಂಡು ವಿಜಯೇಂದ್ರ ಹಾಗೂ ಯಡಿಯೂರಪ್ಪರನ್ನ ಕಂಡ ಕಂಡಲ್ಲಿ ಬೈತಿದ್ದಾರೆ ಯತ್ನಾಳ್. ವಕ್ಫ್ ವಿಚಾರದಲ್ಲಿ ಪ್ರತ್ಯೇಕ ಹೋರಾಟಕ್ಕೆ ಕರೆವಕೊಟ್ಟಿರೋ ರೆಬಲ್ ಟೀಂ ಯಡಿಯೂರಪ್ಪ ರ ಕುಟುಂಬ ರಾಜಕಾರಣ ಹಾಗೂ ಅಡ್ಜೆಸ್ಟ್ಮೆಂಟ್ ಕೊನೆಗೊಳ್ಳಲಿ ಅಂತ ಹೋರಾಡ್ತಿವೆ..
ರೈತರೇ ಗಮನಿಸಿ.. ಪ್ರತಿ ಹೆಕ್ಟೇರ್ʼಗೆ 10,000 ರೂಪಾಯಿ ನೀಡಲಿದೆ ಈ ಯೋಜನೆ! ಇಂದೇ ಅರ್ಜಿ ಸಲ್ಲಿಸಿ
ರೆಬಲ್ ಯತ್ನಾಳ್ ಸೇರಿ ಅವರ ಟೀಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಎಷ್ಟೇ ಮಾತನಾಡಿದ್ರು ಇಷ್ಟು ದಿನ ಕೂಲ್ ಆಗಿದ್ದ ಮಾಜಿ ಸಿಎಂ ಇದೀಗ ತಿರುಗಿಬಿದ್ದಿದ್ದಾರೆ. ಯತ್ನಾಳ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ ಯತ್ನಾಳ್ ಸೇರಿ ಎಲ್ಲರೂ ಹೋರಾಟ ಮಾಡೋದು ಬಿಟ್ಟು ನಮ್ಮ ಜೊತೆ ಸೇರಿ ಹೋರಾಟ ಮಾಡಿ ಅಂತ ವಿಜಯೇಂದ್ರ ವಿನಂತಿ ಮಾಡಿದ್ರು. ಆದ್ರೂ ಕೂಡ ಅವರ ಸ್ವ ಪ್ರತಿಷ್ಠೆಯಾಗಿ ಇದೆಲ್ಲ ಮಾಡ್ತಿರೋದು ಅವರಿಗೆ ಶೋಭೆ ತರುವಂತಹದ್ದು ಅಲ್ಲ. ಪಕ್ಷವನ್ನ ಬಲಪಡಿಸುವುದಕ್ಕೆ ಅವರೆಲ್ಲ ಸಹಕಾರಿ ಕೊಡಬೇಕು ನಮ್ಮ ಡ್ಯೂಟಿ ನಾವು ಮಾಡ್ತಿವಿ, ಉಳಿದಿದ್ದು ಅವರಿಗೆ ಬಿಟ್ಟಿದ್ದು ಕೇಂದ್ರ ನಾಯಕರಿಗೆ ಬಿಟ್ಟಿದ್ದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ ಬಿಎಸ್ವೈ.