ಬೆಂಗಳೂರು: ಆಕೆ ಕೆಲಸದ ಜೊತೆಗೆ ಯೂಟ್ಯೂಬ್ ಸೋಷಿಯಲ್ ಮೀಡೀಯ ಅಂತ ಬ್ಯುಸಿ ಇದ್ದವಳು.ಇತ್ತೀಚೆಗೆ ಹೊಸ ಕೆಲಸಕ್ಕೆಂದು ಒಂದು ಖಾಸಗಿ ಸಂಸ್ಥೆಗೆ ಜಾಯಿನ್ ಆಗಿದ್ದಳು.ಕಳೆದ ಎರಡು ದಿನದ ಹಿಂದೆ ಅಪಾರ್ಟ್ಮೆಂಟ್ ಒಂದರ ರೂಮ್ ಸೇರಿದ್ದವಳು,ಜೊತೆಗಿದ್ದ ಪ್ರಿಯಕರನಿಂದಲೇ ಹತ್ಯೆಯಾಗಿದ್ದಾಳೆ.ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ. ಈ ರೀಲ್ಸ್ ನಲ್ಲಿ ಕಾಣ್ತಿರುವ ಯುವತಿಯ ಹೆಸರು ಮಾಯಾ ಗೊಗಾಯ್ ಅಸ್ಸಾಂ ಮೂಲದವಳು.ಅಸ್ಸಾಂನವಳಾದರೂ ಕೂಡ ಈಕೆಗೆ ಬೆಂಗಳೂರಿನ ನಂಟು.ಕಳೆದ ಮೂರು ವರ್ಷದ ಹಿಂದೆ ಬೆಂಗಳೂರಿನ ಬಗ್ಗೆ ಈಕೆ ಒಂದು ವ್ಲಾಗ್ ವಿಡಿಯೋ ಕೂಡಾ ಮಾಡಿ ಯ್ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಳು.
ಕಳೆದ ಹತ್ತು ದಿನಗಳ ಹಿಂದೆ ಹೆಚ್ ಎಸ್ ಆರ್ ಲೇ ಔಟ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಈಕೆ,ಕಳೆದ ಎರಡು ದಿನದ ಹಿಂದೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಲ್ ಲಿವಿಂಗ್ಸ್ ಎಂಬ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಕೇರಳ ಮೂಲದ ತನ್ನ ಪ್ರಿಯಕರ ಆರವ್ ಅನಾಯ್ ಎಂಬಾತನೊಂದಿಗೆ ರೂಮ್ ಮಾಡಿದ್ಲು,, ಇದೇ ನೋಡಿ ಇವರಿಬ್ಬರು ಅಪಾರ್ಟ್ಮೆಂಟ್ ಒಳಗೆ ಎಂಟ್ರಿಯಾಗ್ತಿರುವ ದೃಶ್ಯಾವಳಿ.
ರೈತರಿಗೆ ಭರ್ಜರಿ ಗುಡ್ ನ್ಯೂಸ್: ಕುರಿ ಸಾಕಾಣಿಕೆ ಮಾಡುವವರಿಗೆ 1.75 ಲಕ್ಷ ಸಬ್ಸಿಡಿ ನೀಡಲಿದೆ ಸರ್ಕಾರ!
ಹೀಗೆ ಅಪಾರ್ಟ್ಮೆಂಟ್ ಒಳಗೆ ಹೋದ ಇವರಿಬ್ಬರು ಎರಡು ದಿನ ಅಲ್ಲೇ ವಾಸವಿದ್ರು.ಇಂದು ಬೆಳಿಗ್ಗೆ ಅಪಾರ್ಟ್ಮೆಂಟ್ ನಿಂದ ಸ್ಥಳೀಯ ಪೊಲೀಸರಿಗೆ ಫೋನ್ ಹೋಗಿದ್ದು ಈ ವೇಳೆ ಯುವತಿ ಮಾಯಾ ಗೊಗಾಯ್ ಭೀಕರವಾಗಿ ಹತ್ಯೆಯಾಗಿರುವ ವಿಷಯ ಹೊರಬಿದ್ದಿತ್ತು. ರೂಮ್ ನ ಒಳಗಿನ ಬೆಡ್ ಮೇಲೆ ಮಾಯಾಳನ್ನ ಆರೊಪಿ ಆರವ್ ಉಸಿರುಗಟ್ಟಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು,ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೈನಲ್ಲಿನ ರಕ್ತನಾಳವನ್ನ ಕತ್ತರಿಸಿ ಹತ್ಯೆ ಮಾಡಿದ್ದಾನೆ.
ಇನ್ನು ನಿನ್ನೆ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿರುವ ಶಂಕೆಉಇದ್ದು,ಈ ಭೀಕರ ಹತ್ಯೆಯ ತೀವ್ರತೆಗೆ ಬೆಡ್ ಮೇಲೆ ಹರಿದ ರಕ್ತವೇ ಸಾಕ್ಷಿ.ಹತ್ಯೆಯ ನಂತರ ಅಪಾರ್ಟ್ಮೆಂಟ್ ರೂಮ್ ನಿಂದ ಆರೋಪಿ ಆರವ್ ಎಸ್ಕೇಪ್ ಆಗಿದ್ದಾನೆ.ಮಾಹಿತಿಯ ನಂತರ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯಾವಳಿಯನ್ನ ಕಲೆ ಹಾಕಿದ್ದಾರೆ.ಇನ್ನು ಎಫ್ ಎಸ್ ಎಲ್ ,ಬೆರಳಚ್ಚು ಅಧಿಕಾರಿಗಳು ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಸದ್ಯ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು,ಆರೋಪಿಯ ಬಂಧನದ ಬಳಿಕವೇ ಆತನ ಮೂಲ ಮತ್ತು ಪ್ರೇಯಸಿಯ ಕೊಲೆಯ ಹಿಂದಿನ ಸತ್ಯಾಸತ್ಯತೆ ಹೊರಬರಬೇಕಿದೆ.