ಕಲಬುರ್ಗಿ:- ಕಲಬುರಗಿ ಪೊಲೀಸರು ಕಾರ್ಯಾಚರಣೆ ಮಾಡಿ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಅರೆಸ್ಟ್ ಮಾಡಿದ್ದಾರೆ.
ಉಮೇರಾ, ನಸರೀನ್ ಹಾಗೂ ಫಾತಿಮಾ ಬಂಧಿತರು. ಮಗುವನ್ನು ರಕ್ಷಿಸಿ ತಾಯಿ ಕಸ್ತೂರಿ ಅವರಿಗೆ ಒಪ್ಪಿಸಲಾಗಿದೆ.
BPL ಕಾರ್ಡ್ ದಾರರಿಗೆ ಸಿಕ್ತು ಗುಡ್ ನ್ಯೂಸ್: ಡಿಸೆಂಬರ್ನಿಂದ ಸಿಗಲಿದೆ ಹೊಸ ರೇಷನ್!
ಮೂವರು ಕಳ್ಳಿಯರ ಖತರ್ನಾಕ್ ಗ್ಯಾಂಗ್ ನವಜಾತಶಿಶುವನ್ನು ಮಾರಾಟಕ್ಕಾಗಿ ಕಿಡ್ನ್ಯಾಪ್ ಮಾಡಿತ್ತು. ಕಳ್ಳತನದ ಬಳಿಕ ಖೈರುನ್ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಅಕ್ಕ ಪಕ್ಕದ ನಿವಾಸಿಗಳಿಂದ ಮಗು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತು. ಕೂಡಲೇ ಎಚ್ಚೆತ್ತ ಪೊಲೀಸರು ಮಗುವನ್ನು ರಕ್ಷಿಸಿ, ಕಳ್ಳಿಯರನ್ನ ಬಂಧಿಸಿದ್ದಾರೆ