ಬೋರ್ಡರ್-ಗಾವಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಅಮೋಘವಾಗಿ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತುರ್ತು ವೈಯಕ್ತಿಕ ಕಾರಣದಿಂದ ಕುಟುಂಬ ಸಮೇತ ಭಾರತಕ್ಕೆ ವಾಪಸಾಗಿದ್ದಾರೆ.
ಡಿ. 6ರಂದು ಅಡಿಲೇಡ್ನಲ್ಲಿ ಆರಂಭವಾಗಲಿರುವ ಪಿಂಕ್ ಬಾಲ್ ಟೆಸ್ಟ್ ವೇಳೆ ಅವರು ಮರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ಅಡಿಲೇಡ್ನ ಓವಲ್ ಮೈದಾನದಲ್ಲಿ ಡಿ. 6 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಶುರುವಾಗಿದ್ದು, ಭಾರತಕ್ಕೆ ಗಂಭೀರ್ ಮರಳಿದ್ದಾರೆ
ವೈಯುಕ್ತಿಕ ಕಾರಣಗಳಿಂದಾಗಿ ಗಂಭೀರ್ ಅವರು ತವರಿಗೆ ವಾಪಾಸ್ಸಾಗಿದ್ದಾರೆ. ಇದಾಗ್ಯೂ ಅವರು ಹಿಂತಿರುಗಲು ಕಾರಣವೇನು ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ.
ಡಿಸೆಂಬರ್ 6 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಆರಂಭವಾಗಲಿದೆ. ಇದಕ್ಕೂ ಕೆಲ ದಿನಗಳ ಮೊದಲು ಅವರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಅಲ್ಲದೆ ಉಳಿದ ಪಂದ್ಯಗಳಿಗೆ ಅವರು ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.
ಭಾರತ ತಂಡವು ಪರ್ತ್ನಿದ ಬುಧವಾರ ಕ್ಯಾನ್ಬೆರಾಗೆ ತೆರಳಲಿದ್ದು, ಅಲ್ಲಿ ಎರಡು ದಿನಗಳ ಕಾಲ ಪಿಂಕ್ ಬಾಲ್ ಅಭ್ಯಾಸ ಪಂದ್ಯವನ್ನು ಆಡಲಿದೆ. ಅತ್ತ ಮುಖ್ಯ ಕೋಚ್ ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್, ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮುಂತಾದವರು ಟೀಮ್ ಇಂಡಿಯಾದ ಉಸ್ತುವಾರಿವಹಿಸಿಕೊಳ್ಳಲಿದ್ದಾರೆ.