ಮಾಂಸಹಾರಿ ಪ್ರಿಯರು ಹೆಚ್ಚಾಗಿ ಚಿಕನ್ ಅನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೋಳಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಅದಕ್ಕಾಗಿಯೇ ಅನೇಕ ಜನರು ಇದನ್ನು ತಿನ್ನಲು ಆಸಕ್ತಿ ತೋರುತ್ತಾರೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಸ್ನಾಯುಗಳನ್ನು ಬಲಪಡಿಸಲು, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
Power Cut: ಬೆಂಗಳೂರಿನ ಹಲವು ಈ ಏರಿಯಾಗಳಲ್ಲಿ ಇಂದಿನಿಂದ ಎರಡು ದಿನ ಪವರ್ ಕಟ್!
ಇತ್ತೀಚಿನ ದಿನಗಳಲ್ಲಿ ಕೋಳಿ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ, ಕೋಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಗಳು ಹೇರಳವಾಗಿವೆ. ವ್ಯಾಯಾಮ ಮಾಡುವವರಿಗೆ ಪ್ರೊಟೀನ್ ಬೇಕಾಗಿರುವುದರಿಂದ ಚಿಕನ್ ತಿನ್ನುತ್ತಾರೆ.
ಅನೇಕ ಮಾಂಸ ಪ್ರಿಯರು ನಿತ್ಯವೂ ಚಿಕನ್ ತಿನ್ನುತ್ತಾರೆ. ಈ ಕೋಳಿ ಬೇಯಿಸುವುದು ತುಂಬಾ ಸುಲಭವಾಗಿದೆ. ಅದರ ಬೆಲೆ ಕೂಡ ಮಟನ್ಗೆ ಹೋಲಿಸಿದರೆ ಕಡಿಮೆ ಬೆಲೆಗೆ ಸಿಗುತ್ತದೆ. ಹಾಗಾಗಿಯೂ ಅನೇಕರು ತಿನ್ನುತ್ತಾರೆ. ಚಿಕನ್ನಲ್ಲಿ ಹಲವರು ವಿವಿಧ ಬಗೆಯ ಆಹಾರವನ್ನು ತಯಾರಿಸುತ್ತಾರೆ.
ಕೆಲವರು ದಿನಕ್ಕೆ ಒಮ್ಮೆ, ಕೆಲವರು ವಾರಕ್ಕೊಮ್ಮೆ, ಮತ್ತು ಕೆಲವರು ಅಪರೂಪಕ್ಕೆ ಚಿಕನ್ ತಿನ್ನುತ್ತಾರೆ. ಆದ್ರೆ, ಚಿಕನ್ನ ಆ ಒಂದು ಭಾಗವನ್ನು ಮಾತ್ರ ಚಿಕನ್ ತಿನ್ನುವಾಗಲೆಲ್ಲಾ ಸೇವಿಸಬಾರದು ಮತ್ತು ಹಾಗಿದ್ರೆ ತಿನ್ನಬಾರದಾದ ಆ ಒಂದು ಭಾಗ ಯಾವುದು ಎಂದು ನೋಡೋಣ.
ಕೋಳಿಯನ್ನು ಅತ್ಯಂತ ವೇಗವಾಗಿ ಬೆಳೆಸಲು ಮತ್ತು ಅದರ ಮಾಂಸವನ್ನು ಹೆಚ್ಚು ತಾಜಾವಾಗಿರಿಸಲು ಕೋಳಿಗಲೀಗೆ ರಾಸಾಯನಿಕ ಚುಚ್ಚುಮದ್ದು ಹಾಕಲಾಗುತ್ತದೆ. ಹಾಗಾಗಿ ಹೃದ್ರೋಗ ತಜ್ಞರು ಕೋಳಿ ಚರ್ಮವನ್ನು ತಿನ್ನಲೇಬಾರದು ಎಂದು ಹೇಳುತ್ತಾರೆ.
ಬ್ರಾಯ್ಲರ್ ಕೋಳಿಗಳಿಗೆ ಅವುಗಳ ತೊಡೆಗೆ ರಸಾಯನಿಕ ಇಂಜೆಕ್ಷನ್ ಅನ್ನು ನೀಡಲಾಗುತ್ತದೆ. ತೂಕ ಹೆಚ್ಚಿಸಲು ಈ ಕೋಳಿಗಳಿಗಳ ತೊಡೆಗೆ ರಸಾಯನಿಕ ಚುಚ್ಚುಮದ್ದುಳನ್ನು ಚುಚ್ಚಲಾಗುತ್ತದೆ. ಜನಪ್ರಿಯ ಹೋಟೆಲ್ಗಳಲ್ಲಿ ತೊಡೆಗಳು ಅತ್ಯಂತ ಜನಪ್ರಿಯ ಆಯ್ಕೆಯಾಗಿಗಿರುತ್ತದೆ.
ಕೋಳಿಯ ಲೆಗ್ ಪೀಸ್ ಅಥವಾ ತೊಡೆ ಪೀಸುಗಳನ್ನು ತಿನ್ನಲು ಭಯಸುವವರು ನಾಟಿ ಕೋಳಿಗಳನ್ನು ಯಾವುದೇ ಸಂಶಯವಿಲ್ಲದೆ ಸುಲಭವಾಗಿ ತಿನ್ನಬಹುದು. ಯಾಕೆಂದರೆ ಈ ನಾಟಿ ಕೋಳಿಗಳಿಗೆ ಯಾವುದೇ ಚುಚ್ಚುಮದ್ದುಗಳನ್ನು ಚುಚ್ಚಿ ಬೇಯಿಸುವುದಿಲ್ಲ. ಹಾಗಾಗಿ ಯಾವುದೇ ಹಾನಿಯ ಭಯವಿಲ್ಲದೆ ಈ ನಾಟಿ ಕೋಳಿಗಳನ್ನು ಸೇವಿಸಬಹುದು.