ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ತಲೆ ಕೂದಲು ಉದುರುವುದು, ಕೂದಲು ಬಿಳಿ ಬಣ್ಣಕ್ಕೆ ತಿರು ಗುವುದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆದರೆ ಕೆಲವೊಂದು ಆರೋಗ್ಯಕಾರಿ ಜೀವನಶೈಲಿ ಹಾಗೂ ಆಹಾರಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ, ಈ ಸಮಸ್ಯೆಯಿಂದ ದೂರವಿರಬಹುದಾಗಿದೆ.
ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಕೋಲಾರ ಸಂಸದ!
ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಬದನೆಕಾಯಿಯು ಸೂಕ್ತವಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಬದನೆಕಾಯಿಯನ್ನು ಕತ್ತರಿಸದೆ ಇಡಿಯಾಗಿ ಅದರಲ್ಲಿಟ್ಟು ಫ್ರೈ ಮಾಡಿ. ಬದನೆಕಾಯಿಯ ಸಿಪ್ಪೆಯ ಬಣ್ಣ ಬದಲಾದ ಬಳಿಕ ಅದನ್ನು ಹೊರ ತೆಗೆಯಿರಿ.
ಸಾಸಿವೆ ಎಣ್ಣೆಗೆ ರೋಸ್ಮರಿ ಎಲೆಗಳು ಮತ್ತು ಸೀಗೆಕಾಯಿಯನ್ನು ಸೇರಿಸಿ. ಇದಕ್ಕೆ ಸ್ವಲ್ಪ ಮೆಂತೆಕಾಳುಗಳನ್ನು ಹಾಕಿ ಎಲ್ಲಾ ಪದಾರ್ಥಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ.
ಹುರಿದ ಬದನೆಕಾಯಿಯನ್ನು ಕತ್ತರಿಸಿ ಅದರಲ್ಲಿ ಬೆರೆಸಿ. ಈ ಎಣ್ಣೆಯನ್ನು ಚೆನ್ನಾಗಿ ಕುದಿಸಿ. ಎಣ್ಣೆಯ ಬಣ್ಣ ಬದಲಾದ ಬಳಿಕ ಫಿಲ್ಟರ್ ಮಾಡಿ ಬಾಟಲಿಯಲ್ಲಿ ತುಂಬಿಸಿ ಶೇಖರಿಸಿಡಿ.
ವಾರದಲ್ಲಿ ಎರಡರಿಂದ ಮೂರು ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗುವುದು.