ಸಾಮಾನ್ಯವಾಗಿ ಎಲ್ಲ ತರಕಾರಿ ಅಂಗಡಿಗಳಲ್ಲೂ ಕಾಣಸಿಗುವ ಸಿಹಿ ಗೆಣಸು ಅದೆಷ್ಟು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ ಎಂದು ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ. ಸಿಹಿ ಗೆಣಸು ಅತೀ ಹೆಚ್ಚು ಪೋಷಕಾಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಆದರೆ ನಾವು ಈ ರೀತಿಯ ಸಿಹಿ ಗೆಣಸನ್ನು ಬಿಟ್ಟು ಕರಿದ ತಿಂಡಿಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಸಿಹಿ ಗೆಣಸಿನ ಉಪಯೋಗ ನಿಮಗೆ ತಿಳಿದರೆ ನೀವು ಸಹ ಗೆಣಸು ಸೇವಿಸಲು ಮುಂದಾಗುತ್ತೀರಿ.
ಕಣ್ಣುಗಳಿಗೆ ಒಳ್ಳೆಯದು:
ಸಿಹಿಗೆಣಸು ತನ್ನಲ್ಲಿ ಬೀಟಾ ಕ್ಯಾರೋಟಿನ್ ಪ್ರಮಾಣವನ್ನು ಹೇರಳವಾಗಿ ಹೊಂದಿದ್ದು, ಇದರ ಸೇವನೆಯಿಂದ ಬೀಟಾ ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ ಮತ್ತು ಅದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದರಿಂದ ರಾತ್ರಿ ಕುರುಡು ಸಮಸ್ಯೆ ಕೂಡ ದೂರವಾಗುತ್ತದೆ. ದೀರ್ಘಕಾಲದವರೆಗೆ ಕಣ್ಣಿನ ಪೊರೆ ಅಥವಾ ದೃಷ್ಟಿ ಮುಂಜಾಗುವ ಸಾಧ್ಯತೆ ಕೂಡ ಇರುವುದಿಲ್ಲ.
ವಿಟಮಿನ್ ಎ, ಸಿ, ಬಿ6, ಆಂಟಿಆಕ್ಸಿಡೆಂಟ್ಗಳು ಮತ್ತು ಫೈಬರ್ನಂತಹ ಪೋಷಕಾಂಶಗಳ ಆಗರವೇ ಸಿಹಿಗೆಣಸು. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಫೈಬರ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಇರುವ ಸಿಹಿಗೆಣಸು ತೂಕ ಇಳಿಸಲು ಸಹಕಾರಿ. ನಾರಿನಂಶದಿಂದ ಸಮೃದ್ಧವಾಗಿರುವ ಸಿಹಿಗೆಣಸು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಸಿಹಿ ಗೆಣಸು ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದೇ ಹೇಳಬಹುದು.
ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ಕಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಿಟಮಿನ್ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.