ಹೆಣ್ಣು ಮಕ್ಕಳಾಗಲಿ, ಅಥವಾ ಗಂಡು ಮಕ್ಕಳಾಗಲಿ ಸಂಬಂಧದಲ್ಲಿ ಮದುವೆ ಆಗೋ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ನಾವ್ ಹೇಳುತ್ತಿರುವ ಸುದ್ದಿ ಅಂತಿದ್ದಲ್ಲ ಮರ್ರೆ.
ಅನೇಕ ಕಾರಣಗಳಿಂದ ಹಿರಿಯರು ಸಂಬಂಧದಲ್ಲಿಯೇ ತಮ್ಮ ಮಕ್ಕಳಿಗೆ ಮದುವೆ ಮಾಡುತ್ತಿದ್ದರು. ಆದರೆ ಇದರಿಂದ ಏನೆಲ್ಲಾ ಗಂಭೀರ ಸಮಸ್ಯೆಗಳು ಎದುರಾಗುತ್ತದೆ ಎಂಬುವುದರ ಬಗ್ಗೆ ಅನೇಕ ಮಂದಿಗೆ ಅರಿವಿಲ್ಲ. ಹಾಗಾದ್ರೆ ರಕ್ತ ಸಂಬಂಧದಲ್ಲಿಯೇ ಮದುವೆ ಆಗುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ.
ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಿ ರಕ್ತ ಸಂಬಂಧದಲ್ಲಿಯೇ ಮದುವೆಯಾವುವುದರ ಬಗ್ಗೆ ಜನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ರಕ್ತಸಂಬಂಧಿ ವಿವಾಹಗಳಲ್ಲಿ ಮಕ್ಕಳು ಆನುವಂಶಿಕ ಕಾಯಿಲೆಗಳೊಂದಿಗೆ ಜನಿಸುತ್ತಾರೆ ಎನ್ನಲಾಗಿದೆ
ಆನುವಂಶಿಕ ಕಾಯಿಲೆಗಳಿಗೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಇಂತಹ ಕಾಯಿಲೆಗಳೊಂದಿಗೆ ಜನಿಸಿದ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ತಾಯಿಯಿಂದ 23 ಕ್ರೋಮೋಸೋಮ್ಗಳನ್ನು ಮತ್ತು ತಂದೆಯಿಂದ 23 ಕ್ರೋಮೋಸೋಮ್ಗಳನ್ನು ಪಡೆದಿರುತ್ತಾರೆ.
ಸಂಬಂಧದಲ್ಲಿಯೇ ಮದುವೆಯಾಗು ಮಕ್ಕಳನ್ನು ಪಡೆದರೆ ಆ ಮಕ್ಕಳಗೆ ವಂಶವಾಹಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. . ವಿವಾಹಿತರ ವಂಶವಾಹಿಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಹಿಂದಿನ ತಲೆಮಾರಿನವರೂ ಇದೇ ರೀತಿ ಸಂಬಂಧದಲ್ಲಿಯೇ ಮದುವೆ ಮಾಡಿಕೊಂಡಿದ್ದರೆ, ಈ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹೀಗಿದ್ದರೂ ನೀವು ರಕ್ತ ಸಂಬಂಧದಲ್ಲಿಯೇ ಮದುವೆಯಾಗಲು ಬಯಸುವುದಾದರೆ, ವಿವಾಹಕ್ಕೂ ಮುನ್ನ ಅನುವಂಶಿಕ ಸಲಹೆಗಾರರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ
ಒಂದು ವೇಳೆ ಅವಕಾಶ ಸಿಕ್ಕರೆ ಇಂತಹ ವಿವಾಹಗಳಿಂದ ದೂರವಿರಲು ಪ್ರಯತ್ನಿಸುವುದು ಉತ್ತಮ. ಇತ್ತೀಚೆಗೆ ಜನಿಸಿದ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಕಂಡು ಬಂದಿದ್ದು, ಇದಕ್ಕೆ ರಕ್ತಸಂಬಂಧದಲ್ಲಿಯೇ ಮದುವೆ ಆಗಿರುವುದೇ ಪ್ರಮುಖ ಕಾರಣವೆಂದು ತಿಳಿದು ಬಂದಿದೆ.
ಇದರಿಂದ ಸಾಕಷ್ಟು ಮಕ್ಕಳಲ್ಲಿ ಕಿವುಡತನ ಮತ್ತು ಮೂಕ ಸಮಸ್ಯೆಗಳು ಉಂಟಾಗಿದೆ. ನಿಜಕ್ಕೂ ರಕ್ತ ಸಂಬಂಧದಲ್ಲಿಯೇ ಮದುವೆ ಆಗುವುದು ಭವಿಷ್ಯದಲ್ಲಿ ಜನಿಸುವ ಮಕ್ಕಳಿಗೆ ಅಪಾಯವನ್ನುಂಟು ಮಾಡುತ್ತದೆ.