ಬಹು ನಿರೀಕ್ಷಿತ 2025ರ ಐಪಿಎಲ್ ಟೂರ್ನಿಯಲ್ಲಾದರೂ ಕಪ್ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಚಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸದಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಫ್ರಾಂಚೈಸಿ, ಒಟ್ಟು 16 ಆಟಗಾರರನ್ನು ಖರೀದಿ ಮಾಡಿದೆ.ಇದರಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ವೈಯಕ್ತಿವಾಗಿ ಗರಿಷ್ಠ ಮೊತ್ತ ನೀಡಿರುವುದು ವಿಶೇಷ.
ನಿಮ್ಮ BPL ಕಾರ್ಡ್ ರದ್ದಾಗಿದ್ಯಾ!? ಚಿಂತೆ ಬಿಡಿ, ಸರ್ಕಾರದಿಂದ ಸಿಕ್ತು ಭರ್ಜರಿ ಗುಡ್ ನ್ಯೂಸ್!
ಆದ್ರೆ ಹರಾಜಿನಲ್ಲಿ RCB ಹಾಗೂ ಮುಂಬೈ ಒಳ ಒಪ್ಪಂದ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದು ಫ್ಯಾನ್ಸ್ ಆಕ್ರೋಶ ಭುಗಿಲೇಳುವಂತೆ ಮಾಡಿದೆ
ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಮಿಂಚಿದ್ರು. ಆರ್ಸಿಬಿ ತಂಡ ಪ್ಲೇ ಆಫ್ಗೆ ಹೋಗಲು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಮೆಗಾ ಹರಾಜಿಗೆ ಮುನ್ನ ಆರ್ಸಿಬಿ ಇವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್ಟಿಎಂ ಕಾರ್ಡ್ ಬಳಸಬಹುದು ಎಂದು ಹೇಳಲಾಗಿತ್ತು. ಆದರೆ, ಆರ್ಸಿಬಿ ಫ್ಯಾನ್ಸ್ ಕನಸಿಗೆ ತಣ್ಣೀರೆರಚಿದ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ಗೆ ವಿಲ್ ಜಾಕ್ಸ್ ಅವರನ್ನು ಆರ್ಟಿಎಂ ಕಾರ್ಡ್ ಬಳಸದೆ ಬಿಟ್ಟುಕೊಟ್ಟಿದೆ.
ಇನ್ನು ವಿಲ್ ಜ್ಯಾಕ್ಸ್ ಖರೀದಿ ಮಾಡುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಎದ್ದು ಹೋಗಿ ಆರ್ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾರ ಕೈ ಕುಲುಕಿ ಧನ್ಯವಾದ ಹೇಳಿದ್ರು. ಇದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಾಲಿಕರ ನಡುವೆ ಒಳ ಒಪ್ಪಂದ ಆಗಿದೆಯೇ ಎನ್ನುವ ಅನುಮಾನ ಮೂಡಿದೆ.