ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ಸಾಕಷ್ಟು ಅಳೆದುತೂಗಿ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಐಪಿಎಲ್ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನ.24 ಮತ್ತು 25ರ ಎರಡು ದಿನಗಳ ಕಾಲ ನಡೆಯಿತು. ಮೆಗಾ ಹರಾಜು ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹರಾಜಿನಲ್ಲಿ ಹಿರಿಯ ಮತ್ತು ಪ್ರತಿಭಾವಂತ ಆಟಗಾರರ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ ಮೆಗಾ ಹರಾಜಿನಲ್ಲಿ ಎಲ್ಲರ ಕಣ್ಣುಗಳು ಜನಪ್ರಿಯ ಐಪಿಎಲ್ ತಂಡ ಆರ್ಸಿಬಿ ಮೇಲಿತ್ತು.
ಹರಾಜಿಗೆ ಮೊದಲು ಆರ್ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಸೇರಿದ್ದು ಅವರನ್ನು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ 20 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದರು. ಮುಂದಿನ ಸೀಸನ್ನಿಂದ ಕೊಹ್ಲಿ ಮತ್ತೆ ತಂಡದ ಕ್ಯಾಪ್ಟನ್ ಆಗಬಹುದು ಎಂಬ ವರದಿಗಳಿವೆ. ಇನ್ನುಳಿದಂತೆ, ರಜತ್ ಪಾಟಿದಾರ್ ಅವರನ್ನು 11 ಕೋಟಿ ರೂ. ಮತ್ತು ಯಶ್ ದಯಾಳ್ ಅವರನ್ನು 4 ಕೋಟಿ ರೂ.ಗೆ ಆರ್ಸಿಬಿ ಉಳಿಸಿಕೊಂಡಿದೆ.
ಮೆಗಾ ಹರಾಜಿನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಆರ್ಸಿಬಿ ಖರೀದಿಸಿದೆ. 8 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 19 ಆಟಗಾರರು ಇದರಲ್ಲಿದ್ದಾರೆ.
ವಿರಾಟ್ ಕೊಹ್ಲಿ 21 ಕೋಟಿ
2 ರಜತ್ ಪಾಟಿದಾರ್ 11 ಕೋಟಿ
3 ಯಶ್ ದಯಾಳ್ 5 ಕೋಟಿ
4 ಲಿಯಾಮ್ ಲಿವಿಂಗ್ಸ್ಟೋನ್ 8.75 ಕೋಟಿ
5 ಫಿಲ್ ಸಾಲ್ಟ್ 11.50 ಕೋಟಿ
6 ಜಿತೇಶ್ ಶರ್ಮಾ 11.00 ಕೋಟಿ
7 ಜೋಶ್ ಹ್ಯಾಜಲ್ವುಡ್ 12.50 ಕೋಟಿ
8 ರಸಿಖ್ ದಾರ್ 6 ಕೋಟಿ
9 ಸುಯ್ಯಾಶ್ ಶರ್ಮಾ 2.60 ಕೋಟಿ
10 ಕೃನಾಲ್ ಪಾಂಡ್ಯ 6.75 ಕೋಟಿ
11 ಭುವನೇಶ್ವರ್ ಕುಮಾರ್ 10.75 ಕೋಟಿ
12 ಸ್ವಪ್ನಿಲ್ ಸಿಂಗ್ 50 ಲಕ್ಷ
13 ಟಿಮ್ ಡೇವಿಡ್ 3 ಕೋಟಿ
14 ರೊಮಾರಿಯೋ ಶೆಫರ್ಡ್ 1.5 ಕೋಟಿ
15 ನುವಾನ್ ತುಷಾರ್ 1.4 ಕೋಟಿ
16 ಜೇಕಬ್ ಬೆತೆಲ್ 2.6 ಕೋಟಿ
17 ಮನೋಜ್ ಭಾಂಡಗೆ 30 ಲಕ್ಷ
18 ದೇವದತ್ ಪಡಿಕ್ಕಲ್ 2 ಕೋಟಿ
19 ಸ್ವಸ್ತಿಕ್ ಚಿಕಾರ 30 ಲಕ್ಷ
20 ಲುಂಗಿ ಎನ್ಗಿಡಿ 1 ಕೋಟಿ
21 ಅಭಿನಂದನ್ ಸಿಂಗ್ 30 ಲಕ್ಷ
22 ಮೋಹಿತ್ ರಾಠಿ 30 ಲಕ್ಷ