ಹಾಲು ಆರೋಗ್ಯಕ್ಕೆ ಒಳ್ಳೆಯದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪ್ರತಿದಿನ ಒಂದು ಗ್ಲಾಸ್ ಆದರೂ ಹಾಲನ್ನು ಕುಡಿಯುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೀಗಾಗಿ ಬೆಳಗ್ಗೆ ಆಗುತ್ತಿದ್ದಂತೆ ಜನ ಅಂಗಡಿಯಿಂದ ಹಾಲಿನ ಪ್ಯಾಕೆಟ್ ಖರೀದಿಸಿ ಮನೆಗೆ ತಂದು ಬಿಸಿ ಮಾಡಿ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕರ.
ಚಳಿಗಾಲದ ಅಧಿವೇಶನ 2 ವಾರಕ್ಕಿಂತ ಹೆಚ್ಚು ನಡೆಸಲು ಮನವಿ! ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ವಿಪಕ್ಷ ಸಜ್ಜು!
ಹಾಲು ಕುಡಿಯುವುದರಿಂದ ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳು ದೊರೆಯುತ್ತವೆ. ಮೂಳೆಗಳಿಗೆ ಬೇಕಾದಂತಹ ಕ್ಯಾಲ್ಸಿಯಂ ಹಾಲಿನಿಂದ ದೊರೆಯುತ್ತದೆ. ಹಾಲಿನಲ್ಲಿರುವ ಇತರ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಹೊರತುಪಡಿಸಿ, ವಿಟಮಿನ್ ಡಿ, ವಿಟಮಿನ್ ಬಿ 12, ಪೊಟ್ಯಾಸಿಯಮ್, ರಂಜಕ, ವಿಟಮಿನ್ ಎ, ಮೆಗ್ನೀಸಿಯಮ್ ಮತ್ತು ರೈಬೋಫ್ಲಾವಿನ್ ಮುಂತಾದ ಅಗತ್ಯ ಅಂಶಗಳು ಅದರಲ್ಲಿ ಕಂಡುಬರುತ್ತವೆ
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹಸು ಮತ್ತು ಎಮ್ಮೆಗಳ ತಾಜಾ ಹಾಲು ಲಭ್ಯವಿರುತ್ತದೆ. ಆದರೆ ನಗರಗಳಲ್ಲಿ ವಾಸಿಸುವ ಜನರಿಗೆ ತಾಜಾ ಹಾಲು ಲಭ್ಯವಿಲ್ಲದೆ ಇರುವ ಕಾರಣ ಹೆಚಿನ ಜನರು ಪ್ಯಾಕೇಟ್ ಹಾಲನ್ನೇ ಬಳಸುತ್ತಾರೆ. ಪ್ಯಾಕೇಜ್ಡ್ ಹಾಲಿನ ವಿಷಯದಲ್ಲಿ ಜನರು ದೊಡ್ಡ ತಪ್ಪು ಮಾಡುತ್ತಿದ್ದಾರೆ ಅದೆಂದರೆ ಪ್ಯಾಕೇಟ್ ಹಾಲನ್ನು ಕುದಿಸಿ ಕುಡಿಯುವುದು.
ಪ್ಯಾಕ್ ಮಾಡಿದ ಹಾಲನ್ನು ಬಿಸಿ ಮಾಡಿದ ನಂತರ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಆಹಾರ ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಹಾಲಿನಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಪ್ಯಾಕೇಜ್ ಮಾಡಿದ ಹಾಲನ್ನು ಬಿಸಿ ಮಾಡಿದ ನಂತರ ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂದು ತಿಳಿಯೋಣ.
ಆರೋಗ್ಯಕ್ಕೆ ಅಪಾಯಕಾರಿಯಾದ ಕ್ರಿಪ್ಟೋಸ್ಪೊರಿಡಿಯಮ್, ಕ್ಯಾಂಪಿಲೋಬ್ಯಾಕ್ಟರ್, ಬ್ರೂಸೆಲ್ಲಾ ಮತ್ತು ಲಿಸ್ಟೇರಿಯಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹಸಿ ಹಾಲಿನಲ್ಲಿ ಹೊಂದಿರಬಹುದು ಎಂದು ತಜ್ಞರು ಹೇಳುತ್ತಾರೆ.
ಈ ಬ್ಯಾಕ್ಟೀರಿಯಾಗಳು ಪಾಶ್ಚರೀಕರಣದ ಮೂಲಕ ನಾಶವಾಗುತ್ತವೆ, ಹಾಲನ್ನು ಸುರಕ್ಷಿತವಾಗಿಸುತ್ತವೆ. ಆದಾಗ್ಯೂ, ಅನೇಕ ಜನರು ಅದರ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸಲು ಹಾಲನ್ನು ಬಿಸಿಮಾಡುತ್ತಾರೆ ಆದರೆ ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತದೆ.
ವಿಟಮಿನ್ ಬಿ 12 ಹಾಲಿನಲ್ಲಿ ಕಂಡುಬರುತ್ತದೆ. ಇದು ಇಡೀ ದೇಹಕ್ಕೆ ಶಕ್ತಿ ನೀಡಲು ಕೆಲಸ ಮಾಡುವ ಪೋಷಕಾಂಶವಾಗಿದೆ. ಇದರ ಕೊರತೆಯು ಮೂಳೆಗಳಲ್ಲಿ ದೌರ್ಬಲ್ಯ, ರಕ್ತಹೀನತೆ, ಸ್ನಾಯುಗಳು ದುರ್ಬಲಗೊಳ್ಳಬಹುದು ಮತ್ತು ಮೆದುಳು ದುರ್ಬಲಗೊಳ್ಳಬಹುದು. ಪ್ಯಾಕ್ ಮಾಡಿದ ಹಾಲನ್ನು ಬಿಸಿ ಮಾಡುವುದರಿಂದ ಈ ಪೋಷಕಾಂಶ ನಾಶವಾಗುತ್ತದೆ ಎಂದು ಆಹಾರ ತಜ್ಞರು ಹೇಳಿದ್ದಾರೆ
ನಾವು ಹಾಲಿನಿಂದ ಪನ್ನೀರ್ ತಯಾರಿಸುವಾಗ ಅಥವಾ ಹಾಲಿನಿಂದ ಇನ್ಯಾವುದಾದರೂ ತಿನಿಸುಗಳನ್ನು ತಯಾರಿಸುವಾಗ ಪ್ಯಾಕೆಟ್ ಹಾಲನ್ನು ಬಿಸಿ ಮಾಡಬೇಕು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ನೀವು ಹಾಲು ಕುಡಿಯಲು ಬಯಸಿದರೆ ಅದನ್ನು ಬಿಸಿ ಮಾಡುವ ಅಗತ್ಯವಿಲ್ಲ ಸ್ವಲ್ಪ ಬೆಚ್ಚಗಾಗಿಸಿದರೆ ಸಾಕು.