ಮನೆಯಲ್ಲಿ ಗೆದ್ದಲು, ಇರುವೆ ಗೂಡು ಕಟ್ಟುತ್ತಿದೆಯಾ? ಮರದ ವಸ್ತುಗಳನ್ನು ನಾಶಮಾಡುತ್ತಿದೆಯಾ? ಅದರಲ್ಲೂ ಪ್ರಧಾನವಾಗಿ, ಬೇಸಿಗೆಯಲ್ಲಿ ವಿಶೇಷವಾಗಿ ಅವುಗಳ ಕಿರುಕುಳಕ್ಕೆ ಒಳಗಾಗುತ್ತಿದ್ದೀರಾ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ರೀತಿಯ ಸ್ಪ್ರೇಗಳು ಮತ್ತು ವೀಧಾನ ತಂತ್ರಗಳನ್ನು ಬಳಸಲಾಗುತ್ತದೆ. ಆದರೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೇ ಗೃಹೋಪಯೋಗಿ ವಸ್ತುಗಳನ್ನೇ ಬಳಸಿ ಓಡಿಸಬಹುದು.
ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ: ಡಿಕೆ ಶಿವಕುಮಾರ್ ಎಚ್ಚರಿಕೆ
ಮಳೆಗಾಲದಲ್ಲಿ ಎಲ್ಲಾ ಕಡೆ ಶೀತ ವಾತಾವರಣ ಹಾಗೂ ತಂಪಿನ ವಾತಾವರಣ ಇರುತ್ತದೆ. ಆದ್ದರಿಂದ ಮನೆಯ ಬಾಗಿಲು ಅಥವಾ ಬೇರೆ ಬೇರೆ ಕಡೆಗಳಲ್ಲಿ ನಿಮಗೆ ಗೆದ್ದಲು ಹುಳುಗಳು ಕಾಣಿಸಿಕೊಳ್ಳಬಹುದು.
ಹಾಗಾದರೆ ಈ ಗೆದ್ದಲು ಹುಳಗಳನ್ನು ಹೇಗೆ ಓಡಿಸುವುದು ಎಂದು ನೀವು ಚಿಂತೆ ಮಾಡುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ಈ ರೀತಿ ಮಾಡಿದರೆ ಖಂಡಿತ ನಿಮಗೆ ಗೆದ್ದಲು ಹುಳದ ಸಮಸ್ಯೆ ಇರುವುದಿಲ್ಲ.
ಈ ಗೆದ್ದಲುಗಳು ನೋಡಲು ತುಂಬಾ ಚಿಕ್ಕದಾಗಿರುತ್ತವೆ. ಆದರೆ ಇವು ಮಾಡುವ ಹಾನಿ ಅಷ್ಟಿಷ್ಟಲ್ಲ. ಈ ಗೆದ್ದಲುಗಳು ಮರದ ಕಿಟಕಿಗಳು, ಗೋಡೆಗಳು, ಬಾಗಿಲುಗಳ ಜೊತೆಗೆ ಪುಸ್ತಕಗಳನ್ನು ತಿನ್ನುತ್ತವೆ. ಇದರಿಂದಾಗಿ ಬಹಳಷ್ಟು ನಷ್ಟವಾಗುತ್ತದೆ. ಇವುಗಳನ್ನು ಹಾಗೆಯೇ ಬಿಟ್ಟರೆ, ಅವು ನಮ್ಮ ಮನೆಯನ್ನೇ ನಾಶಮಾಡುತ್ತವೆ.
ನಿಮ್ಮ ಮನೆಯಲ್ಲಿ ಗೆದ್ದಲುಗಳಿದ್ದರೆ ಅವುಗಳನ್ನು ಮೊದಲೇ ಗುರುತಿಸಿ. ಒಂದು ವೇಳೆ ಇದ್ದರೆ.. ಮನೆಯಿಂದ ಹೇಗೆ ಓಡಿಸಬೇಕೆಂದು ಈಗ ತಿಳಿದುಕೊಳ್ಳೋಣ
ನಿಂಬೆ ರಸ, ವಿನೆಗರ್
ನಿಂಬೆ ರಸ ಮತ್ತು ವಿನೆಗರ್ನಿಂದ ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಬಹುದು. ಗೆದ್ದಲುಗಳನ್ನು ಮನೆಯಿಂದ ಓಡಿಸಲು ಈ ಎರಡೂ ತುಂಬಾ ಪರಿಣಾಮಕಾರಿ. ಗೆದ್ದಲುಗಳಿಗೆ ನಿಂಬೆ ವಾಸನೆ ಇಷ್ಟವಾಗುವುದಿಲ್ಲ.
ಗೆದ್ದಲುಗಳನ್ನು ತೊಡೆದುಹಾಕಲು ಎರಡು ಟೀ ಚಮಚ ವಿನೆಗರ್ನಲ್ಲಿ ಒಂದು ಟೀ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಇದನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ. ಹೀಗೆ ಆಗಾಗ್ಗೆ ಮಾಡಿದರೆ ಗೆದ್ದಲುಗಳು ನಾಶವಾಗುತ್ತವೆ. ಮತ್ತೆ ಮನೆಗೆ ಬರುವುದಿಲ್ಲ.
ಲವಂಗ
ಲವಂಗದಿಂದಲೂ ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಬಹುದು. ಆದರೆ ಇವುಗಳನ್ನು ನೇರವಾಗಿ ಬಳಸಬಾರದು. ಒಂದು ಪಾತ್ರೆಯಲ್ಲಿ ನೀರು ಹಾಕಿ ಲವಂಗವನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರು ತಣ್ಣಗಾದ ನಂತರ ಸ್ಪ್ರೇ ಬಾಟಲಿಯಲ್ಲಿ ಹಾಕಿ. ಇದನ್ನು ಗೆದ್ದಲುಗಳಿರುವ ಜಾಗದಲ್ಲಿ ಸ್ಪ್ರೇ ಮಾಡಿ. ಇದರಿಂದ ಗೆದ್ದಲುಗಳು ಸಂಪೂರ್ಣವಾಗಿ ನಾಶವಾಗುತ್ತವೆ.
ಸಿಟ್ರಸ್ ಎಣ್ಣೆ
ಸಿಟ್ರಸ್ ಎಣ್ಣೆಯಿಂದಲೂ ಗೆದ್ದಲುಗಳನ್ನು ಓಡಿಸಬಹುದು. ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಹೆಚ್ಚಾಗಿರುತ್ತದೆ. ಮನೆಯಲ್ಲಿ ಗೆದ್ದಲುಗಳನ್ನು ತೊಡೆದುಹಾಕಲು ನೀವು ಸಿಟ್ರಸ್ ಎಣ್ಣೆಯನ್ನು ಬಳಸಿ. ಈ ಸಿಟ್ರಸ್ ಎಣ್ಣೆ ಎಲ್ಲಾ ಅಂಗಡಿಗಳಲ್ಲಿ ಸಿಗುತ್ತದೆ. ಈ ಎಣ್ಣೆಯನ್ನು ಸ್ಪ್ರೇ ಮಾಡಿದರೆ ಗೆದ್ದಲುಗಳು ಸಂಪೂರ್ಣವಾಗಿ ಹೋಗುತ್ತವೆ.
ಬೇವಿನ ಎಣ್ಣೆ
ಬೇವಿನ ಎಣ್ಣೆಯಿಂದಲೂ ಗೆದ್ದಲುಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಬೇವಿನ ಎಣ್ಣೆಯ ವಾಸನೆ ಗೆದ್ದಲುಗಳನ್ನು ನಾಶಮಾಡುತ್ತದೆ. ಈ ಎಣ್ಣೆಯಿಂದ ಗೆದ್ದಲುಗಳು ಮಾತ್ರವಲ್ಲ, ಮನೆಯಲ್ಲಿರುವ ನೊಣಗಳು, ಚಿಟ್ಟೆಗಳು, ಸಣ್ಣ ಪುಟ್ಟ ಹುಳುಗಳನ್ನು ಕೂಡ ತೊಡೆದುಹಾಕಬಹುದು. ಇದಕ್ಕಾಗಿ ಬೇವಿನ ಎಣ್ಣೆಯನ್ನು ಒಂದು ಬಟ್ಟೆಯಲ್ಲಿ ಅದ್ದಿ ಗೆದ್ದಲುಗಳಿರುವ ಜಾಗದಲ್ಲಿ ಒರೆಸಿದರೆ ಸಾಕು.