2025ರ IPL ಗಾಗಿ ಬರೋಬ್ಬರಿ 83 ಕೋಟಿ ಹಣವನ್ನ ಇಟ್ಟುಕೊಂಡು ಮೆಗಾ ಆಕ್ಷನ್ ಅಖಾಡಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಗಾ ಆಕ್ಷನ್ನ ಮೊದಲ ದಿನವೇ ಕ್ವಾಲಿಟಿ ಆಟಗಾರರನ್ನು ಖರೀದಿ ಮಾಡಿತ್ತು.
BBK11: ಬಿಗ್ ಬಾಸ್ ಮನೆಯಲ್ಲಿ ಮೊಳಗಿದ ದರ್ಶನ್ ಸಾಂಗ್: ಕುಣಿದು ಕುಪ್ಪಳಿಸಿದ ರಜತ್!
ಮೆಗಾ ಹರಾಜಿನಲ್ಲಿ ಆರ್ಸಿಬಿ ಕನಿಷ್ಠ 15 ಆಟಗಾರರನ್ನು ಖರೀದಿಸಲೇಬೇಕಿತ್ತು. ಅದರಂತೆ ಆರ್ಸಿಬಿ 19 ಆಟಗಾರರನ್ನು ಖರೀದಿಸಿದ್ದು, ತಂಡದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ 22 ಕ್ಕೇರಿದೆ.
ಮೆಗಾ ಹರಾಜಿನ ಮೊದಲ ದಿನ ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಖರೀದಿಸಿತ್ತು. ಹೀಗಿರುವಾಗ ಹರಾಜಿನ ಎರಡನೇ ಮತ್ತು ಕೊನೆಯ ದಿನದಂದು ಆರ್ಸಿಬಿ 5 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 16 ಆಟಗಾರರನ್ನು 30.65 ಕೋಟಿ ರೂ.ಗೆ ಖರೀದಿಸಬೇಕಿತ್ತು. ಅದರಂತೆ ಎರಡನೇ ದಿನ ಹರಾಜಿಗೆ ಪ್ರವೇಶಿಸಿದ್ದ ಆರ್ಸಿಬಿ, 13 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಆರ್ಸಿಬಿ ಯಾವ ಆಟಗಾರರನ್ನು ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಆಟಗಾರರ ವಿವರ
ವಿರಾಟ್ ಕೊಹ್ಲಿ (23 ಕೋಟಿ, ರಿಟೈನ್)
ರಜತ್ ಪಾಟಿದಾರ್ (11 ಕೋಟಿ, ರಿಟೈನ್)
ಯಶ್ ದಯಾಳ್ (5ಕೋಟಿ ರಿಟೈನ್)
ಲಿಯಾಮ್ ಲಿವಿಂಗ್ಸ್ಟೋನ್: 8.75 ಕೋಟಿ
ಫಿಲ್ ಸಾಲ್ಟ್: 11.50 ಕೋಟಿ
ಜಿತೇಶ್ ಶರ್ಮಾ: 11 ಕೋಟಿ
ಜೋಶ್ ಹ್ಯಾಜಲ್ವುಡ್: 12.50 ಕೋಟಿ
ರಸಿಖ್ ದಾರ್: 6 ಕೋಟಿ
ಸುಯಶ್ ಶರ್ಮಾ: 2.60 ಕೋಟಿ
ಭುವನೇಶ್ವರ್ ಕುಮಾರ್: 10.75 ಕೋಟಿ
ಕೃನಾಲ್ ಪಾಂಡ್ಯ: 5.75 ಕೋಟಿ
ಸ್ವಪ್ನಿಲ್ ಸಿಂಗ್: 50 ಲಕ್ಷ
ಟಿಮ್ ಡೇವಿಡ್: 3 ಕೋಟಿ
ಜಾಕೋಬ್ ಬೆಥೆಲ್: 2.6 ಕೋಟಿ
ರೊಮಾರಿಯೋ ಶೆಫರ್ಡ್: 1.50 ಕೋಟಿ
ನುವಾನ್ ತುಷಾರ: 1.60 ಕೋಟಿ
ದೇವದತ್ ಪಡಿಕಲ್: 2 ಕೋಟಿ
ಸ್ವಸ್ತಿಕ್ ಚಿಕಾರ: 30 ಲಕ್ಷ
ಮನೋಜ್ ಭಾಂಡಗೆ: 30 ಲಕ್ಷ
ಲುಂಗಿ ಎನ್ಗಿಡಿ: 1 ಕೋಟಿ
ಅಭಿನಂದನ್ ಸಿಂಗ್: 30 ಲಕ್ಷ
ಮೋಹಿತ್ ರಥಿ: 30 ಲಕ್ಷ