ಕೊಪ್ಪಳ:- ಸಾಮಾನ್ಯವಾಗಿ ಟೀ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಅನೇಕರು ತಲೆನೋವು ಬಂದ್ರೆ ಹೆಚ್ಚು ಟೀ ಮೊರೆ ಹೋಗ್ತಾರೆ ಈ ಮೂಲಕ ರಿಲ್ಯಾಕ್ಸ್ ಆಗ್ತಾರೆ. ಇಂತಹ ಟೀ ಪ್ರಿಯರಿಗೆ ಒಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಅಪಾಯಕಾರಿ ಬಣ್ಣ ಸೇರಿಸಿ, ಯಾವುದೇ ಪರವಾನಗಿ ಇಲ್ಲದೇ, ನಕಲಿ ಬ್ರ್ಯಾಂಡ್ಗಳ ಹೆಸರಲ್ಲಿ ಕಳಪೆ ಮತ್ತು ಕಲಬೆರಿಕೆ ಟೀ ಪುಡಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.
ಜಿಲ್ಲೆಯ ಗಂಗಾವತಿ ನಗರದ ಕಾರಟಗಿ ರಸ್ತೆಯಲ್ಲಿ ವಿಷ್ಣುರಾಮ್ ಚೌದರಿ ಎನ್ನುವವರ ಗೋಡೌನ್ ಸೇರಿದಂತೆ ದಿಢೀರ್ನೆ ಕೆಲ ಕಂಪನಿಯ ಸಿಬ್ಬಂದಿ ಮತ್ತು ಪೊಲೀಸರು ಟೀ ಪೌಡರ್ ಸಂಗ್ರಹಿಸಿದ್ದ ಗೋಡೌನ್ಗೆ ಎಂಟ್ರಿ ಕೊಟ್ಟಾಗ ಮಾಲೀಕ ಶಾಕ್ ಆಗಿದ್ದಾರೆ. ಯಾಕಂದರೆ ಇಲ್ಲಿ ಸಂಗ್ರಹಿಸಿರುವುದು ಯಾವುದೋ ಗುಣಮಟ್ಟದ ಟೀ ಪೌಡರ್ ಆಗಿರಲಿಲ್ಲ. ಜೊತೆಗೆ ಪರವಾನಗಿಯಿರುವ ಕಲರ್ ಕೂಡ ಇರಲಿಲ್ಲ.
ಜಿಲ್ಲೆಯ ಗಂಗಾವತಿ ಸೇರಿದಂತೆ ಅನೇಕ ಕಡೆ ಹೆಚ್ಚಿನ ವ್ಯಾಪರಸ್ಥರು ಟೀ ಪೌಡರ್ ಅನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕರು ಗುಣಮಟ್ಟದ ಟೀ ಪೌಡರ್ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಗುಣಮಟ್ಟವಲ್ಲದ ಟೀ ಪೌಡರ್ನ್ನು ತಂದು, ಅದಕ್ಕೆ ಕೆಲ ಅಪಾಯಕಾರಿ ಕಲರ್ನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಸಕ್ರಿಯಾವಾಗಿರುವ ಈ ಜಾಲ, ಟೀ ಪೌಡರ್ನ್ನು ಮಾರಾಟ ಮಾಡುತ್ತಿದೆ.
ಸ್ವಲ್ಪ ಬೆಲೆ ಕಡಿಮೆ ಇರುವುದರಿಂದ ಜನರು ಇಂತಹ ಟೀ ಪೌಡರ್ನ್ನು ಖರೀದಿಸುತ್ತಿದ್ದಾರೆ. ಇನ್ನು ಇವರು ಟೀ ಪೌಡರ್ ಮಾರಾಟ ಮಾಡುವುದಕ್ಕೆಂದು ಅನೇಕ ನಕಲಿ ಬ್ರ್ಯಾಂಡ್ಗಳನ್ನು ಕೂಡ ಮಾಡಿಕೊಂಡಿದ್ದಾರೆ. ಅನೇಕ ಬ್ರ್ಯಾಂಡ್ಗಳ ಹೆಸರಲ್ಲಿ ಚೀಲ್ಗಳನ್ನು ತಯಾರಿಸಿದ್ದಾರೆ. ಆದರೆ ಅವುಗಳಿಗೆ ಯಾವುದೇ ಪರವಾನಗಿಯೇ ಇಲ್ಲಾ. ಟೀ ಪೌಡರ್ ಚೀಲಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕ, ವಿಳಾಸ ಸೇರಿದಂತೆ ಯಾವುದೇ ಮಾಹಿತಿಯನ್ನು ಹಾಕದೇ, ಕೇವಲ ಕೆಲ ಬ್ರ್ಯಾಂಡ್ ಹೆಸರು ಹಾಕಿ, ಅದರಲ್ಲಿ ಟೀ ಪೌಡರ್ ಹಾಕಿ ಮಾರಾಟ ಮಾಡುತ್ತಿದ್ದಾರೆ.
ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.