ಬಹುನಿರೀಕ್ಷಿತ 2025ರ 2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನ್ನಡಿಗ ಮನೋಜ್ ಅವರಿಗೆ ಮಣೆ ಹಾಕಿದೆ. ಬೇಸ್ ಪ್ರೈಸ್ 30 ಲಕ್ಷ ನೀಡಿ ಮನೋಜ್ ಅವರನ್ನು ಆರ್ಸಿಬಿ ಬಿಡ್ ಮಾಡಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯುವ ಕ್ರಿಕೆಟಿಗ ಮನೋಜ್ ಭಾಂಡಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ರು. ಆದರೆ ಇಲ್ಲಿವರೆಗೂ ಫ್ರಾಂಚೈಸಿ ಮನೋಜ್ ಅವರಿಗೆ ಆಡಲು ಒಂದೇ ಒಂದು ಅವಕಾಶ ನೀಡಿಲ್ಲ. ಮನೋಜ್ಗೆ ಆಡುವ ಸಾಮರ್ಥ್ಯವಿದ್ದರೂ ಅವಕಾಶ ನೀಡದ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ರು.
ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್ಸಿಬಿ, ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತಂಡಕ್ಕೆ ಯಾವ್ಯಾವ ಆಟಗಾರರು ಬರಬೇಕೆಂದು ಅಭಿಮಾನಿಗಳು ಬಯಸಿದ್ದರೋ, ಆ ಯಾವ ಆಟಗಾರರನ್ನು ಆರ್ಸಿಬಿ ಖರೀದಿಸಿಲ್ಲ. ಇತ್ತ IPL 2025ರ ಹರಾಜಿನ ಕೊನೆಯ ದಿನದಂದು ಕನ್ನಡಿಗನನ್ನು ಖರೀದಿಸಲು ಕೊನೆಗೂ ಆರ್ಸಿಬಿ ಮನಸು ಮಾಡಿದೆ. ಅದರಂತೆ ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಅವರನ್ನು ಮತ್ತೆ ಖರೀದಿಸುವ ಕೆಲಸವನ್ನು ಆರ್ಸಿಬಿ ಮಾಡಿದೆ.
ಐ ಡೋಂಟ್ ಕೇರ್: ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರಕ್ಕೆ ಸಚಿವ ಬೈರತಿ ರಿಯಾಕ್ಟ್!
ಮನೋಜ್ ಭಾಂಡಗೆ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ. ಈ ಎರಡೂ ಆವೃತ್ತಿಗಳಲ್ಲೂ ಮನೋಜ್ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.
ಮನೋಜ್ ಮೇಲೆ ಮತ್ತೆ ಬಿಡ್ ಮಾಡಿರುವ ಆರ್ಸಿಬಿ ಅವರ ಮೂಲ ಬೆಲೆ 30 ಲಕ್ಷಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ವಾಸ್ತವವಾಗಿ ಮನೋಜ್ಗೂ ಮೊದಲು ಕರ್ನಾಟಕದ ಹಲವು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರು. ಆದರೆ ಆರ್ಸಿಬಿ, ಅವರಲ್ಲಿ ಯಾರನ್ನು ಖರೀದಿಸುವ ಮನಸು ಮಾಡಲಿಲ್ಲ. ಹೀಗಾಗಿ ಆರ್ಸಿಬಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಕನ್ನಡಿಗರ ಕಣ್ಣೊರೆಸುವ ಕೆಲಸಕ್ಕೆ ಮುಂದಾಗಿರುವ ಆರ್ಸಿಬಿ, ಏಕೈಕ ಕನ್ನಡಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಆರ್ಸಿಬಿ ಈ ಖರೀದಿ ಮಾಡಲು ಕಾರಣವೂ ಇದ್ದು, ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯವಾಗಿತ್ತು. ಏಕೆಂದರೆ ಈ ಟೂರ್ನಿಯಲ್ಲಿ ಮೈಸೂರು ಪರ ಆಡಿದ 12 ಪಂದ್ಯಗಳಿಂದ ಮನೋಜ್, 25 ಸಿಕ್ಸರ್ಗಳ ಸಹಿತ 292 ರನ್ ಕಲೆಹಾಕಿದ್ದರು.