ಚಳಿಗಾಲದ ಸಮಯದಲ್ಲಿ ಹೊರಗಿನ ಚುಮುಚುಮು ಚಳಿಯಲ್ಲಿ ಅಡ್ಡಾಡುವುದು, ಬೆಚ್ಚಗಿನ ಚಳಿ ಮಿಶ್ರಿತ ಮುಂಜಾನೆಯೊಂದಿಗೆ ಬೆಳಗನ್ನು ಆರಂಭಿಸುವುದು ಎಂದರೆ ಒಂದು ರೀತಿಯ ಉಲ್ಲಾಸವನ್ನುಂಟು ಮಾಡುತ್ತದೆ. ಮೈ ಕೊರೆಯುವ ಚಳಿ ಇದ್ದಾಗಲೂ ಸಣ್ಣಗೆ ಮೈ ತಾಕುವ ಎಳೆಬಿಸಿಲು ಯಾರಿಗಾದರೂ ಪುಳಕವನ್ನುಂಟು ಮಾಡುವುದು ಖಂಡಿತ. ಅದರಲ್ಲಿ ದೊಡ್ಡವರಂತೆ ಮಕ್ಕಳು ಕೂಡ ಚಳಿಗಾಲದ ಸಮಯದಲ್ಲಿ ಹೊರಗೆ ಅಡ್ಡಾಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಚಳಿಗಾಲದಲ್ಲಿಪೋಷಕರು ತಮ್ಮ ಮಕ್ಕಳ ಆರೋಗ್ಯವನ್ನು ಯಾವ ರೀತಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಅನಾರೋಗ್ಯ ಕಾಡದಂತೆ ಎಚ್ಚರಿಕೆ ವಹಿಸಿ, ಮಕ್ಕಳ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವುದು ಹೇಗೆ? ಇಲ್ಲಿವೆ ಕೆಲವು ಸರಳ ಸಲಹೆಗಳು.
Dinesh Gundurao: ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಸೇವೆ ಅನನ್ಯ:ಸಚಿವ ದಿನೇಶ್ ಗುಂಡೂರಾವ್!
ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಬಳಸಿ:
ಮಕ್ಕಳಿಗೆ ನೀಡುವ ಆಹಾರಗಳಲ್ಲಿ ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಬಳಸಿ. ಬೇರೆ ಬೇರೆ ರೀತಿಯ ಎಣ್ಣೆ ಮಾರುಕಟ್ಟೆಗಳಲ್ಲಿ ಲಭ್ಯವಿದ್ದರೂ ಕೂಡ ನೀವು ತೆಂಗಿನ ಎಣ್ಣೆ ಅಥವಾ ಗಾಣದ ಎಣ್ಣೆಯನ್ನು ಬಳಸಿ. ಇದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೆ ಚಳಿಗಾಲದಲ್ಲಿ ತೆಂಗಿನ ಎಣ್ಣೆಯ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಚರ್ಮದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ.
ಸೂರ್ಯಕಾಂತಿ ಮತ್ತು ಕುಂಬಳ ಬೀಜ
ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಕುಂಬಳಕಾಯಿ ಬೀಜದಲ್ಲಿಒಮೆಗಾ-3 ಫ್ಯಾಟಿ ಆ್ಯಸಿಡ್ ಮತ್ತು ಆ್ಯಮಿನೋ ಆ್ಯಸಿಡ್ ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಮಕ್ಕಳು ಇಷ್ಟಪಟ್ಟು ತಿನ್ನುವ ಆಹಾರ- ಹಣ್ಣುಗಳ ಜೊತೆ ಇವುಗಳನ್ನು ಸೇರಿಸಿ ಕೊಡುವುದರಿಂದ ಚಳಿಗಾಲದಲ್ಲಿ ನಿಮ್ಮ ಮಕ್ಕಳನ್ನು ಬಾಧಿಸುವ ಆರೋಗ್ಯ ಸಮಸ್ಯೆಗಳಿಂದ ಸುಲಭವಾಗಿ ದೂರ ಇಡಬಹುದು.
ಹಣ್ಣು- ತರಕಾರಿಗಳ ಸೇವನೆ ಹೆಚ್ಚಾಗಿರಲಿ
ನಾವು ದಿನನಿತ್ಯ ಸೇವಿಸುವ ತರಕಾರಿ ಮತ್ತು ಹಣ್ಣುಗಳು ಪೋಷಕಾಂಶಗಳ ಆಗರವಾಗಿವೆ. ಚಳಿಗಾಲದ ಸಮಯದಲ್ಲಿ ಇವುಗಳನ್ನು ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ಆಹಾರಗಳಲ್ಲಿ ನೀಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಇವು ಸಹಕಾರಿಯಾಗಲಿವೆ. ಪೇರಳೆ, ಸೇಬು, ಕಿತ್ತಳೆ ಮತ್ತು ಸ್ಟ್ರಾಬೆರಿಯಂತಹ ಹಣ್ಣುಗಳಲ್ಲಿಯೂ ವಿಟಮಿನ್ ಹೇರಳವಾಗಿರುತ್ತದೆ. ಹಾಗಾಗಿ ಇವು ಮಕ್ಕಳ ಬೆಳವಣಿಗೆಗೂ ಪೂರಕವಾಗಿರಲಿವೆ. ತರಕಾರಿ ಮತ್ತು ಹಣ್ಣುಗಳನ್ನು ಹೊರತುಪಡಿಸಿದರೆ ನಟ್ಸ್ ಮತ್ತು ಸೀಡ್ಸ್ಗಳು ಕೂಡ ಆರೋಗ್ಯಕರ ಕೊಬ್ಬು, ವಿಟಮಿನ್ಗಳು ಮತ್ತು ಮಿನರಲ್ಸ್ಗಳನ್ನ ಹೇರಳವಾಗಿ ಒಳಗೊಂಡಿರುತ್ತದೆ. ಇವನ್ನ ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಸುಲಭವಾಗಿ ಅವರ ಆರೋಗ್ಯ ಕಾಪಾಡಬಹುದಾಗಿದೆ.