ವಿಜಯಪುರ ಜಿಲ್ಲೆಯ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವಂತೆ ಒತ್ತಾಯಿಸಿ ಆಲಮೇಲ ತಾಲೂಕಿನ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು. ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ವ್ಯವಸಾಯಕ್ಕಾಗಿ ಗುತ್ತಿಗೆ ಪಡೆದ ಜಮೀನುಗಳಲ್ಲಿ ಅಂದಾಜು 23 ಸಾವಿರ ಎಕರೆ ಪ್ರದೇಶದಲ್ಲಿ ಅಂದಾಜು 6 ಲಕ್ಷ ಮೆಟ್ರೀಕ್ ಟನ್ ಕಬ್ಬಿನ ಬೆಳೆಯನ್ನು ಬೆಳೆದಿದ್ದು, ಅದರ ಅವಧಿಯು ಮುಗಿದಿದೆ.
ಪ್ರತಿ ವರ್ಷದಂತೆ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವುದು ಎಂಬ ನಂಬಿಕೆಯ ಮೇಲೆ ನಾವು ನಮ್ಮ ಜಮೀನಿನಲ್ಲಿ ಬೆಳೆದಿರುವ ಅವಧಿ ಮುಗಿದಿರುವ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವ ಸಲುವಾಗಿ ಅಂದಾಜು ಒಂದು ತಿಂಗಳಿಗಿಂತ ಹೆಚ್ಚು ದಿನಗಳಿಂದ ಕಬ್ಬಿಗೆ ನೀರು ಬಿಡುವುದನ್ನು ನಿಲ್ಲಿಸಿದ್ದೇವೆ.
ಆದರೇ ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಕೂಡಾ ಕಾರ್ಖಾನೆಯವರು ಕಬ್ಬು ನುರಿಸುವಿಕೆಯನ್ನು ಪ್ರಾರಂಭಿಸುತ್ತಿಲ್ಲ, ಕೇಳಿದಾಗ ಸರಿಯಾದ ಕಾರಣ ಹೇಳದೆ ದಿನಗಳನ್ನು ಮುಂದೂಡುತ್ತಿದ್ದಾರೆ ಹಾಗೂ ಕಾರ್ಖಾನೆ ಪ್ರಾರಂಭದ ಬಗ್ಗೆ ಸುಳಿವೂ ಕೂಡಾ ನೀಡುತ್ತಿಲ್ಲ. ಈಗಾಗಲೇ ಬೆಳೆದಿರುವ ಕಬ್ಬು ಅವಧಿ ಮುಗಿದು ಒಣಗಿ ಹೋಗುತ್ತಿದೆ ಆದಷ್ಟು ಬೇಗಾ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು…