ಬೆಂಗಳೂರು: ಸರ್ಕಾರಿ ದಾಖಲೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ?. ಲೋಕಾಯುಕ್ತ ವರದಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಡಾ ವಿಚಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು 144 ಫೈಲ್ ತಗೆದುಕೊಂಡು ಹೋಗಿದಾರೆ ಎಂಬ ವಿಚಾರವಾಗಿ, ಮಾತನಾಡಿದ ಅವರು, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತಗೆದುಕೊಂಡು ಹೋಗ್ತಾರೆ? ಸರ್ಕಾರಿ ದಾಖಲೆ ಅದು, ಅದೆಲ್ಲಾ ಹೇಗೆ ತಗೆದುಕೊಂಡು ಹೋಗೋಕೆ ಸಾಧ್ಯ? ಲೋಕಾಯುಕ್ತ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ರೈತರ ಗಮನಕ್ಕೆ.. ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಬರಲ್ಲ 19ನೇ ಕಂತಿನ ಹಣ!?
ಮುಸ್ಲಿಂ ಮತಗಳು ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ಕುಮಾರಸ್ವಾಮಿಗೆ ಪಾಪ ಆ ಜನ ಮತ ಹಾಕಿದ್ದರು. ಇವಾಗ ಬಿಜೆಪಿ ಜೊತೆಗೆ ಹೋಗಿರುವಾಗ ಯಾಕೆ ಮತ ಹಾಕ್ತಾರೆ? ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ? ಮಂತ್ರಿ ಮಾಡಿದ್ರಾ? 4% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ, ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು ಎಂದಿದ್ದಾರೆ.