ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಯಾತ್ರಾ, ಓಲಾ ಮತ್ತು ಉಬರ್ ಸಂಸ್ಥೆಗಳ ಯಾವುದೇ ಕಾರಣಕ್ಕೋ ಅನುಮತಿ ಕೊಡುವುದು ಬೇಡಾ ಎಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿಂದು ಅಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.ಹುಬ್ಬಳ್ಳಿ ಅಟೋ ಚಾಲಕರ ಸಂಘ ಹಾಗೂ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಜಂಟಿಯಾಗಿ ವಿರೋಧ ವ್ಯಕ್ತಪಡಿಸಿವೆ.
ರೈತರ ಗಮನಕ್ಕೆ.. ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಬರಲ್ಲ 19ನೇ ಕಂತಿನ ಹಣ!?
ನಗರದ ನಿಲಿಂಜನ್ ರಸ್ತೆಯಲ್ಲಿನ ಅಟೋ ಚಾಲಕರ ಸಂಘದ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿ ತಹಸೀಲ್ದಾರ ಕಚೇರಿ ತಲುಪಿತು.ನಮಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅಟೋ ನಿಲ್ದಾಣಗಳು ಇಲ್ಲ, ಸರಿಯಾದ ರಸ್ತೆ ಇಲ್ಲ. ಪಿಕ್ ಅಪ್ ಪಾಯಿಂಟ್ ಇಲ್ಲ, ಅಟೋ ಚಾಲಕರಿಗೆ ಸೌಲಭ್ಯ ಇಲ್ಲ. ಇಂತಗ ಸಂದರ್ಭದಲ್ಲಿ ಓಲಾ, ಉಮರ್ ಹಾಗೂ ಯಾತ್ರಾ ಸಂಚಾರಕ್ಕೆತೀವ್ರ ಪೈಪೋಟಿಯನ್ನು ನೀಡಿ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆಗಲ್ಲ.
ಈ ಕುರಿತು ಸಾರಿಗೆ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ನಮ್ಮ ಯಾತ್ರಿ ಆ್ಯಪ್ ಸೇವೆ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಕ್ಕೆ ನಮ್ಮ ವಿರೋಧ ಇದ ಎಂದು ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಒತ್ತಾಯ ಮಾಡಿದರು.”ಮುಕ್ತ ಸಂಚಾರ ನೆಟ್ವರ್ಕ್ ಅಂಗವಾಗಿ ಕೇಲ ದಿನಗಳ ಹಿಂದೆ ಕೊಚ್ಚಿಯಲ್ಲಿ ಕೇರಳ ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಅಥಾರಿಟಿ (ಕೆಎಂಟಿಎ) ಮತ್ತು ಬೆಕ್ನ್ ಪ್ರತಿಷ್ಠಾನ ಜಂಟಿಯಾಗಿ ಯಾತ್ರಾ ಆ್ಯಪ್ ಬಿಡುಗಡೆ ಮಾಡಿತ್ತು.
ನಮ್ಮಲ್ಲಿ ಸಹ ಯಾತ್ರಿ ಆ್ಯಪ್ ಬಗ್ಗೆ ಜನರಿಗೆ ಕುತೂಹಲವಿದೆ. ನಗರದಲ್ಲಿ ಈ ಹಿಂದೆ ಪರಿಚಯಿಸಿದ್ದ ಆ್ಯಪ್ ಆಧಾರಿತ ಟಾಕ್ಸಿ ಸೇವೆ ವಿಫಲಗೊಂಡಿದ್ದರಿಂದ ಜನರಲ್ಲಿ ಗೊಂದಲ ಹಾಗೂ ಸಂದೇಹಗಳಿವೆ. 2017ರಲ್ಲಿ ಆ್ಯಪ್-ಆಧಾರಿತ ಕ್ಯಾಬ್ ಸೇವೆ ನಮ್ಮ ಟೈಗರ್ ಬಿಡುಗಡೆ ಮಾಡಿತ್ತು. ಆದರೆ, ಅದು ಯಶಸ್ವಿಯಾರಲಿಲ್ಲ. ನಂತರ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.