ಬೆಂಗಳೂರು:- ಬೆಂಗಳೂರಲ್ಲಿ ಐತಿಹಾಸಿಕ ಪ್ರಸಿದ್ಧ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದೆ.
ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಹೀನಾಯ ಸೋಲು: ರಾಜ್ಯಾಧ್ಯಕ್ಷರೊಬ್ಬರನ್ನೇ ದೂರೋದು ಸರಿಯಲ್ಲ ಎಂದ ಪರಿಷತ್ ಸದಸ್ಯ!
ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಈ ಕಡಲೆಕಾಯಿ ಪರಿಷೆಗೆ ಹಿನ್ನೆಲೆ/ ಇತಿಹಾಸ ಇದೆ. ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಸೋಮವಾರ ಇಂದಿನಿಂದ ಆರಂಭವಾಗಲಿದೆ. ಆದರೆ, ಎಂದಿನಂತೆ ಎರಡು ದಿನಕ್ಕೆ ಮುಂಚಿತವಾಗಿಯೇ ಸಡಗರ ಆರಂಭವಾಗಿದೆ.
ಹೀಗಾಗಿ ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳು ಕಳೆಗಟ್ಟಿವೆ. ಎತ್ತ ನೋಡಿದರತ್ತ ಕಡಲೆಕಾಯಿ, ಜನವೋ ಜನ. ನಿನ್ನೆ ರವಿವಾರವಾದ ಹಿನ್ನೆಲೆಯಲ್ಲಿ ಕಡಲೆಕಾಯಿ ಪರಿಷೆಗೆ ಸಾಕಷ್ಟು ಜನರು ಬಂದಿದ್ದರು. ಹೀಗಾಗಿ ಎಲ್ಲಿ ನೋಡಿದರೂ ಜನವೋ ಜನ ನೆರದಿದ್ದರು.
ಬಸವನಗುಡಿಯ ಕಡಿಲೆಕಾಯಿ ಪರಿಷೆಯಲ್ಲಿ 10 ಬಗೆಯ ಬಗೆಯ ಕಡಲೆಕಾಯಿಗಳು ಬಂದಿವೆ. ಕೋಲಾರ, ತಮಿಳುನಾಡು, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶ, ಸೇರಿದಂತೆ ವಿವಿಧೆಡೆಯಿಂದ ರೈತರು ಬಂದಿದ್ದು, ನಾಟಿ, ಫಾರಂ, ಬೋಂಡಾ ಹಾಗೂ ಬಾದಮಿ ಕಡಲೆಕಾಯಿಗಳು ಪ್ರಮುಖ ಆಕರ್ಷಣೆಯಾಗಿದ್ದವು.