ಗದಗ: ಪಂಚಮಸಾಲಿ ಸಮಾಜ, ದೀಕ್ಷಾ ಲಿಂಗಾಯತರಿಗೆ ರಾಜ್ಯದ 2A ಮೀಸಲಾತಿ ಮತ್ತು ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರದ OBC ಮೀಸಲಾತಿಗೆ ಹಕ್ಕೊತ್ತಾಯಿಸಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಗದಗ ಜಿಲ್ಲಾ ಲಿಂಗಾಯತ ಪಂಚಮಸಾಲಿ ಮಹಾಸಭಾ, ಪಂಚ ಸೇನೆ, ಪಂಚಮಸಾಲಿ ಅಡ್ವಕೇಟ್ ಪರಿಷತ್ ಜಿಲ್ಲಾ ಘಟಕ ಹಾಗೂ ಯುವ ಘಟಕದ ವತಿಯಿಂದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಗದಗ ನಗರದ ಬಸವೇಶ್ವರ ಕಾಲೇಜಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಮತ್ತು ಬೃಹತ್ ಟ್ರಾಕ್ಟರ್ ರ್ಯಾಲಿ ಕುರಿತು ಪೂರ್ವಭಾವಿ ಸಭೆಯನ್ನ ಆಯೋಜನೆ ಮಾಡಲಾಗಿತ್ತು.
ವಕ್ಫ್ ವಿರುದ್ಧ ತೊಡೆ ತಟ್ಟಿದ ರೆಬಲ್ಸ್ ಟೀಂ: ಇಂದಿನಿಂದ ಯತ್ನಾಳ್ ನೇತೃತ್ವದಲ್ಲಿ ಹೋರಾಟ ಶುರು!
ಪಂಚಮಸಾಲಿ ಸಮಾಜದ ಸಾಮಾಜಿಕ ಶ್ರೇಯೋಭಿವೃಧ್ಧಿಗೆ, ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಅನುಕೂಲ ಆಗಬೇಕಂದ್ರೆ ಮೀಸಲಾತಿ ಪಡೆದೇ ತೀರಬೇಕೆಂದು ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿಗಳ ಹೋರಾಟ ಬಗ್ಗುಬಡಿಯೋ ಷಡ್ಯಂತ್ರ ನಡೀತಿದೆ. ಚುನಾವಣೆ ಬಂದಾಗ ಓಟ್ ಹಾಕಲು, ಕಂದಾಯ ಕಟ್ಟಲು ಮಾತ್ರ ನಾವು ಸೀಮಿತವಾಗಿದ್ದೇವೆ.
ನಮ್ಮ ರಕ್ತದ ಕಣ ಕಣದಲ್ಲಿ ಹೋರಾಟದ ಕಿಚ್ಚು ಇದೆ, ಈ ಬಾರಿ ದೆಹಲಿಯಲ್ಲಿ ಪಂಜಾಬ್ ರೈತರು ಹೋರಾಟ ಮಾಡಿದಂತೆ ಹೋರಾಟ ಮಾಡ್ತೇವೆ. ಮೀಸಲಾತಿ ಪ್ರಮಾಣಪತ್ರ ನಮ್ಮ ಕೈಗೆ ಸಿಗೋವರೆಗೂ ಹೋರಾಟ ಮಡ್ತೇವೆ. ಡಿ.10 ರಂದು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಟ್ರಾಕ್ಟರ್ ರ್ಯಾಲಿ ಮಾಡೋ ಮೂಲಕ ಮುತ್ತಿಗೆ ಹಾಕಿ 2A ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡಲು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಹಲವು ಸಾಧಕರಿಗೆ ಕಿತ್ತೂರು ಚನ್ನಮ್ಮ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲೆಯ ಪಂಚಮಸಾಲಿ ಸಮಾಜಬಾಂಧವರು ಉಪಸ್ಥಿತರಿದ್ದರು.