ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲವು ಅಚ್ಚರಿಯ ಖರೀದಿಗಳು ನಡೆಯುತ್ತಿದೆ. ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ತನ್ನ ಹಳೆಯ ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಿನದ ಮೊದಲ ಖರೀದಿಯಾಗಿ ಶಾರುಖ್ ಫ್ರಾಂಚೈಸ್ ವೆಂಕಟೇಶ್ ಅಯ್ಯರ್ ಅವರನ್ನು 23 ಕೋಟಿ 75 ಲಕ್ಷ ರೂ.ಗಳಿಗೆ ಖರೀದಿಸಿದೆ.
IPL Mega Auction 2025: ಆರ್ಸಿಬಿ ಪಾಲಾದ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗಸ್ಟನ್!
ವೆಂಕಟೇಶ್ ಅಯ್ಯರ್ 2021 ರಿಂದ ಕೆಕೆಆರ್ ತಂಡದ ಪರ ಆಡುತ್ತಿದ್ದು, ಈ ತಂಡದ ಜೊತೆಗೆ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ ಕೆಕೆಆರ್, ವೆಂಕಟೇಶ್ ಅವರನ್ನು ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಆದರೀಗ ಕೆಕೆಆರ್ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತ ನೀಡಿ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವೆಂಕಟೇಶ್ ಅವರನ್ನು ಖರೀದಿಸಲು ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ಕಂಡುಬಂದಿತು. ಈ ದೇಶೀ ಆಟಗಾರನಿಗಾಗಿ ಆರ್ಸಿಬಿ 23.50 ಕೋಟಿ ರೂಗಳನ್ನು ಖರ್ಚು ಮಾಡಲು ಸಿದ್ದವಾಗಿತ್ತು. ಆದರೆ ಕೆಕೆಆರ್ 23.75 ಕೋಟಿ ರೂ. ನೀಡಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.