ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲವು ಅಚ್ಚರಿಯ ಖರೀದಿಗಳು ನಡೆಯುತ್ತಿದೆ. ತಂಡದಲ್ಲಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿಗೆ ಒಬ್ಬ ಸ್ಪಿನ್ ಆಲ್ರೌಂಡರ್ನ ಅವಶ್ಯಕತೆ ಇತ್ತು. ಅದರಂತೆ ಇಂಗ್ಲೆಂಡ್ನ ಸ್ಫೋಟಕ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿಯ ಮೊದಲ ಖರೀದಿಯಾಗಿ ರೆಡ್ ಆರ್ಮಿಯನ್ನು ಕೂಡಿಕೊಂಡಿದ್ದಾರೆ.
IPL Mega Auction 2025: ಕನ್ನಡಿಗರಿಗೆ ನಿರಾಸೆ: RCBಗೆ ಬರಲಿಲ್ಲ ಕೆಎಲ್ ರಾಹುಲ್!
ಲಿವಿಂಗ್ಸ್ಟೋನ್ರನ್ನು ಖರೀದಿಸಲು ಆರಂಭದಲ್ಲೇ ಆರ್ಸಿಬಿ ಕಣಕ್ಕಿಳಿಯಿತು. ಇತ್ತ ಆರ್ಸಿಬಿ ಟಕ್ಕರ್ ನೀಡಲು ಹೈದರಾಬಾದ್ ಎದುರಾಯಿತು. ಅಂತಿಮವಾಗಿ ಹೈದರಾಬಾದ್ 4 ಕೋಟಿಗೆ ತನ್ನ ಬಿಡ್ ನಿಲ್ಲಿಸಿತು. ಈ ವೇಳೆ ಅಖಾಡಕ್ಕಿಳಿದ ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿ 7 ಕೋಟಿ ಬಿಡ್ ಮಾಡಿತು. ಆದರೆ ಅಂತಿಮವಾಗಿ ಆರ್ಸಿಬಿ 8.75 ಕೋಟಿ ನೀಡಿ ಲಿವಿಂಗ್ಸ್ಟೋನ್ರನ್ನು ಖರೀದಿ ಮಾಡಿದೆ.
2022 ರ ಮೆಗಾ ಹರಾಜಿನಲ್ಲಿ 11.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಲಿವಿಂಗ್ಸ್ಟೋನ್, ಕಳೆದ 3 ವರ್ಷಗಳಿಂದ ಈ ತಂಡದ ಭಾಗವಾಗಿದ್ದರು. ಆದರೆ ಕಳೆದ 2 ಸೀಸನ್ಗಳಲ್ಲಿ ಅವರ ಪ್ರದರ್ಶನ ವಿಶೇಷವೇನು ಆಗಿರಲಿಲ್ಲ. ಇದರಿಂದಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು.