ಗದಗ;ಅದು ಕವಿ ರನ್ನನಿಗೆ ಆಶ್ರಯ ನೀಡಿದ್ದ ಕವಿವರ ಕಾಮಧೇನು, ದಾನಚಿಂತಾಮಣಿ ಅತ್ತಿಮಬ್ಬೆಯ ಪಾವನ ಭೂಮಿ, ಶರಣ ಸಹೋದರ-ಸಹೋದರಿ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿ. ಕಲ್ಯಾಣದ ಚಾಲುಕ್ಯರ ಕರ್ಮಭೂಮಿ, ಹೊಯ್ಸಳರ ರಾಜಧಾನಿ. ತನ್ನ ಗತಕಾಲದ ವೈಭವದಿಂದಲೇ ಹೆಸರಾದ ಆ ಗ್ರಾಮದಲ್ಲಿ 101 ದೇವಸ್ಥಾನ ಹಾಗೂ 101 ಭಾವಿಗಳಿವೆ ಎಂಬ ಪ್ರತೀತಿಯೂ ಇದೆ. ಇದೀಗ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲರ ಇಚ್ಛಾಶಕ್ತಿಯಿಂದಾಗಿ ಆ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಡೆಯುತ್ತಿದ್ದು ಪಲ್ಲಕ್ಕಿ ಮೂಲಕ ಮನೆ ಮನೆಗೆ ತೆರಳಿ ಅವುಗಳ ಸ್ವೀಕಾರ ಕಾರ್ಯ ನಡೀತಿದೆ. ಯಾವುದಾ ಐತಿಹಾಸಿಕ ಗ್ರಾಮ ಅಂತೀರಾ ಈ ಸ್ಟೋರಿ ನೋಡಿ….
ಉಪಚುನಾವಣೆ: ಕರ್ನಾಟಕದಲ್ಲಿ ಹಣ, ಹೆಂಡ ನೀಡಿ ಹರಿಸಿರೋದು ನಿಜ ಎಂದ ಹರಿಪ್ರಸಾದ್!
ಎಸ್ ಈ ಎಲ್ಲಾ ದೃಷ್ಯಗಳು ಕಂಡುಬಂದಿದ್ದು ಗದಗ ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ. ಗತ ಕಾಲದ ಇತಿಹಾಸ ಹೊಂದಿರೋ ಐತಿಹಾಸಿಕ ಲಕ್ಕುಂಡಿ ಗ್ರಾಮವು 101 ದೇವಸ್ಥಾನ ಮತ್ತು 101 ಬಾವಿಗಳನ್ನ ಹೊಂದಿದೆ ಎಂದು ಹೇಳಲಾಗತ್ತೆ. ಆದ್ರೆ ಇದೀಗ ಸಿಕ್ಕಿರೋದು ಕೇವಲ 6-7 ಮಾತ್ರ. ಜೊತೆಗೆ ಲಕ್ಕುಂಡಿ ಗ್ರಾಮ ಕವಿ ರನ್ನನಿಗೆ ಆಶ್ರಯ ನೀಡಿದ್ದ ಭೂಮಿ, ದಾನಚಿಂತಾಮಣಿ ಅತ್ತಿಮಬ್ಬೆಯ ಪಾವನ ಭೂಮಿ, ಶರಣ ಸಹೋದರ-ಸಹೋದರಿ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿಯಾಗಿದ್ದು ಕಲ್ಯಾಣದ ಚಾಲುಕ್ಯರ ಕರ್ಮಭೂಮಿ ಹಾಗೂ ಹೊಯ್ಸಳರ ರಾಜಧಾನಿಯಾಗಿತ್ತು.
ಹಿಂದೆ ಲಕ್ಕುಂಡಿ ಗ್ರಾಮದಲ್ಲಿ ಟಂಕಶಾಲೆ ಕೂಡಾ ಇತ್ತೆಂದು ಇತಿಹಾಸ ಹೇಳತ್ತೆ. ಹಾಗಾಗಿ ಇದೀಗ ತಮ್ಮ ವಿಶೇಷ ಆಸಕ್ತಿಯಿಂದ ಸಚಿವ ಎಚ್ ಕೆ ಪಾಟೀಲ್ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದಕ್ಕೆ ಚಾಲನೆಯನ್ನ ನೀಡಿದ್ರು. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸೋ ಕುರಿತು ಶೀಘ್ರವೇ ಕೇಂದ್ರಕ್ಕೆ ಪತ್ರ ಬರೆಯೋ ಯೋಚನೆ ಇದೆ ಅಂದ್ರು. ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ ಸಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಮನೆ ಮನೆಗೆ ತೆರಳಿ ಪಲ್ಲಕ್ಕಿಯಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹ ಕಾರ್ಯ ಮಾಡಿದ್ರು. ಇಡೀ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಆ ಕುರಿತು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದು ಹೀಗೆ….
ಇನ್ನು ಇಡೀ ಗ್ರಾಮದಲ್ಲಿ ನಿಂತಲ್ಲಿ ಗುಂಡಿ ಅಗೆದ್ರೂ ಅಲ್ಲಿ ಏನಾದ್ರೂ ಒಂದಿಲ್ಲೊಂದು ಪ್ರಾಚೀನ ಅವಶೇಷಗಳು ಸಿಗುತ್ತವೆ ಎನ್ನಲಾಗತ್ತೆ. ಮಳೆಯಾದಾಗ ಕೆಲ ಜಮೀನುಗಳಲ್ಲಿ ಹಾಗೂ ಲಕ್ಕುಂಡಿ ಗ್ರಾಮದಲ್ಲಿ ನಾಣ್ಯಗಳು ಹಾಗೂ ಪ್ರಾಚೀನ ಅವಶೇಷಗಳು ಸಿಗುತ್ತವೆ. 40 ವರ್ಷಗಳಿಂದ ಪ್ರಾಚೀನ ವಸ್ತುಗಳ ಸಂಗ್ರಹವನ್ನೇ ಹವ್ಯಾಸ ಮಾಡಿಕೊಂಡಿರೋ ಬಸಪ್ಪ ಬಡಿಗೇರ ಎನ್ನೋರು ಇಂದು ಸಚಿವ ಡಾ. ಎಚ್ ಕೆ ಪಾಟೀಲ್, ಶಾಸಕ ಸಿ ಸಿ ಪಾಟೀಲ್ ರ ಸಮ್ಮುಖದಲ್ಲಿ ತಾವು ಸಂಗ್ರಹಿಸಿದ ಲಕ್ಕುಂಡಿಯ ಗತಕಾಲದ ವಸ್ತುಗಳನ್ನ ನೀಡಿದ್ರು. ಆ ಮೂಲಕ ಪ್ರಾಚ್ಯಾವಶೇಷಗಳ ಸಂಗ್ರಹ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ.
ಒಟ್ನಲ್ಲಿ ಲಕ್ಷ್ಮಿಯ ನೆಲೆ, ಲೊಕ್ಕಿ ಗುಂಡಿ ಅಂದ್ರೆ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹ ಕಾರ್ಯ ನಡೀತಿದ್ದು ಆದಷ್ಟು ಬೇಗನೇ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಲಕ್ಕುಂಡಿ ಗ್ರಾಮ ಸೇರಲಿ. ಲಕ್ಕುಂಡಿ ಗತ ವೈಭವ ಇಡೀ ಜಗತ್ತಿಗೇ ತಿಳಿಯಲಿ. ಹಂಪೆಯಂತೆಯೇ ಲಕ್ಕುಂಡಿ ಕೂಡಾ ಪ್ರವಾಸಿ ತಾಣವಾಗಲಿ, ಇತಿಹಾಸ ಅಧ್ಯಯನಕಾರರಿಗೆ ಅನುಕೂಲ ಆಗಲಿ ಅನ್ನೋದೇ ಗ್ರಾಮಸ್ಥರ ಆಶಯ….