ಬೆಂಗಳೂರು:- ಮುಸ್ಲಿಂ ಸಮುದಾಯದಿಂದ ನನ್ನ ಸೋಲು ಎಂಬ ನಿಖಿಲ್ ಹೇಳಿಕೆಗೆ ಸಿಎಂ ಇಬ್ರಾಹಿಂ ತಿರುಗೇಟು ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಅಪ್ಪಾ ನಿಖಿಲಾ, ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ರಾಮನಗರದಲ್ಲಿ ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು. ಪ್ರಧಾನಿಯಾಗಿದ್ದಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ. ಅಷ್ಟೇ ಅಲ್ಲ ನಿಮ್ಮಪ್ಪ ಸಾಬ್ರ ಮತಗಳಿಂದಲೇ ಗೆದ್ದಿದ್ದು ಎಂದು ಟಾಂಗ್ ಕೊಟ್ಟಿದ್ದಾರೆ.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದಾಗಲೇ ನಾನು ಹೇಳಿದ್ದೆ, ಚನ್ನಪಟ್ಟಣ ಚುನಾವಣೆನ ನನ್ನ ಬಿಟ್ಟು ನಡೆಸಿ ಎಂದಿದ್ದೆ. ನಾನಿದ್ದಾಗ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ರು, ಈಗ ನಿಖಿಲ್ ಕುಮಾರಸ್ವಾಮಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ಸುದ್ದಿಗೋಷ್ಠಿ ನೋಡಿ ಅಯ್ಯೋ ಅನಿಸಿತು, ಚಿಕ್ಕವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ನಿಖಿಲ್ಗೆ ತಿವಿದರು.
ಜಿಟಿ ದೇವೇಗೌಡರು ಇವತ್ತು ಸತ್ಯವನ್ನ ನುಡಿದಿದ್ದಾರೆ. ಜಿಟಿಡಿ ನಮ್ಮ ಪಾರ್ಟಿಗೆ ಬಂದಿರಲಿಲ್ಲ ನಾನೇ ಅವರ ಮನೆಗೆ ನಿಮ್ಮಜ್ಜನ ಕರ್ಕೊಂಡು ಹೋಗಿದ್ದು. ಇನ್ನು ಚುನಾವಣೆಯಲ್ಲಿ 60 ಬರಬೇಕಿದ್ದ ಸೀಟು, 19 ಬಂತು. ನಿಮ್ಮಪ್ಪ ಚುನಾವಣಾ ಪೂರ್ವದಲ್ಲಿ ಅಮಿತ್ ಶಾ ಜೊತೆ ಮಾತಾಡಿದ್ದು ಗೊತ್ತಾಗಿ ಕಡಿಮೆ ಬಂತು. ಅದು ಸಾಬ್ರು ಓಟಿಂದ ಗೆದ್ದಿದ್ದು ಎಂದರು.