ಹುಬ್ಬಳ್ಳಿ: ಮೊಬೈಲ್ ಫೋನ್ ಬಳಕೆ ಮಾಡಿ ವಾಹನ ಚಲಾಯಿಸುವುದು, ಅಜಾಗರೂಕತೆ, ತ್ರಿಬಲ್ ರೈಡಿಂಗ್ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘಿಸುವುದನ್ನು ತಡೆಯಲು ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಅಭಿಯಾನ ಶುರುವಾಗಿದೆ.
ದ್ವಿಚಕ್ರ ವಾಹನ, ಆಟೋರಿಕ್ಷಾ ಸೇರಿ ಇತರ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ. ಇಂಥ ಪ್ರಕರಣ ಕಂಡುಬಂದಲ್ಲಿ ದ್ವಿಚಕ್ರವಾಗಿದ್ದರೆ ಒಂದೂವರೆ ಸಾವಿರ ರೂ., ನಾಲ್ಕು ಚಕ್ರದ ವಾಹನ ಆಗಿದ್ದರೆ ಮೂರು ಸಾವಿರ ರೂ. ದಂಡ ಹಾಕಿ ಪ್ರಕರಣ ದಾಖಲಿಸಲಾಗುತ್ತಿದೆ.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
ಅಪಾಯಕಾರಿ ವಾಹನ ಚಲಾಯಿಸಿದ್ದರೆ ಬಿಎನ್ಎಸ್ ಕಾಯ್ದೆಯಡಿ ವಾಹನ ಸೀಜ್, ಮೊಬೈಲ್ ಫೋನ್ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ ಫೋನ್ ಬಳಕೆ ಮಾಡಿ ವಾಹನ ಚಲಾಯಿಸುತ್ತಿದ್ದ 100ಕ್ಕೂ ಹೆಚ್ಚು ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಾಯಕಾರಿ ವಾಹನ ಚಲಾಯಿಸಿದ ನಾಲ್ಕು ಚಕ್ರದ ವಾಹನಗಳ ಮೇಲೆ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ನಗರದಲ್ಲಿ ಸುದ್ದಿಗಾರರಿಗೆ ವಿವರಿಸಿದರು.
ಒಂದೊಂದು ಕಡೆ ಜಂಕ್ಷನ್ ಮಾಡಿದ್ದೇವೆ. ಅಪ್ತಾಪ್ತರು ಬೈಕ್ ಚಲಾಯಿಸಬಾರದು. ಹೀಗಾದ್ದಲ್ಲಿ ಅವರ ಪೋಷಕರು ಮತ್ತು ಪಾಲಕರಿಗೆ ದಂಡ ವಿಧಿಸಲಾಗುವುದು. ಶಾಲಾ-ಕಾಲೇಜ್ಗಳಲ್ಲಿ ಆಡಳಿತ ಮಂಡಳಿಯವರು ವಾಹನಗಳ ಆರ್ಸಿ, ಡಿಎಲ್, ಹೆಲ್ಮಟ್ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಬೈಕ್ ಪೆಟ್ರೋಲಿಂಗ್: ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಬೈಕ್ ಪೆಟ್ರೋಲಿಂಗ್ ಮಾಡಲಿದ್ದಾರೆ. ಮಹಿಳೆಯರೊಂದಿಗೆ ಅನುಚಿತ ವರ್ತನೆ, ಗುಂಪುಕಟ್ಟಿಕೊಂಡು ತೊಂದರೆ ಕೊಡುವುದು, ಹೆಲ್ಕೆಟ್ ರಹಿತ ಓಡಾಟ ಮಾಡುವುದು, ತ್ರಿಬಲ್ ರೈಡಿಂಗ್ ಮಾಡಬಾರದು. ಮೊಬೈಲ್ ಸ್ವಾಡ್ ಸನ್ನದ್ಧವಾಗಿದ್ದು, ರ್ಯಾಂಡಮ್ ಮತ್ತು ಸರ್ಪ್ರೈಸ್ ವಿಸಿಟ್ ಕೊಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾದಕ ವಸ್ತು ಮುಕ್ತ ಮಾಡಿದಂತೆ ಮಹಿಳೆಯರ ಸುರಕ್ಷತೆಗಾಗಿ ಬೈಕ್ ಪೆಟ್ರೋಲಿಂಗ್ ಮಾಡಲಾಗುತ್ತಿದೆ ಎಂದರು.