ಭಾಷಾಧರಿತ ರಾಜ್ಯಗಳ ಉದಯದ ಬಳಿಕ ಕನ್ನಡಿಗರ ರಾಜ್ಯ ಕರ್ನಾಟಕವಾಯಿತು.ನಮ್ಮ ಉಸಿರು ಮತ್ತು ಬದುಕು ಕನ್ನಡವಾದಾಗ ಮಾತ್ರ ಭಾಷೆಯ ಉಳಿಕೆ ಸಾಧ್ಯವಾಗುತ್ತದೆ.ಜಾಗತಿಕ ಮಟ್ಟದಲ್ಲಿನ ಜ್ಞಾನಕ್ಕಾಗಿ ಯಾವುದೇ ಭಾಷೆ ಅಭ್ಯಸಿಸಿದರೂ ನಮ್ಮ ಮನೆಯ ಭಾಷೆ, ವ್ಯವಹಾರಿಕ ಭಾಷೆ ಕನ್ನಡವಾಗಬೇಕು. ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತದೆಂದು ಪತ್ರಕರ್ತರಾದ ಶಿವಾನಂದ ಮಹಾಬಲಶೆಟ್ಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಸಿರಾಜಸಾಬ, ಮುರಾದಸಾಬ್ ದರ್ಗಾ ಬಳಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಹಜರತ್ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.ಸರ್ಕಾರದ ಆದೇಶಗಳಿಂದ ಭಾಷೆ, ಸಂಸ್ಕೃತಿ ಬದುಕದು ಬದಲಾಗಿ ಕನ್ನಡಿಗರೆಲ್ಲರಲ್ಲಿ ಭಾಷಾಭಿಮಾನ ಜಾಗೃತಗೊಂಡು ಬಳಕೆಯ ಅಭಿಮಾನ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಲವಾದ ಆಶಯವಿದ್ದರೆ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯವಿದೆ.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
ಟಿಪ್ಪು ಸುಲ್ತಾನ ಬಗ್ಗೆ ನಮ್ಮ ಕಾಲಘಟ್ಟದಲ್ಲಿ ಓದಿದ್ದ ಇತಿಹಾಸಕ್ಕೆ ಇದೀಗ ಅಪಸ್ವರವೆದ್ದಿದೆ. ಗತಿಸಿದ ವ್ಯಕ್ತಿಯ ಶೌರ್ಯ, ಪರಾಕ್ರಮ, ದೇಶಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಜೀವಮಾನವಿಡೀ ಬ್ರಿಟೀಷರೊಡನೆ ನಡೆಸಿದ ಕೆಚ್ಚೆದೆಯ ಹೋರಾಟಗಳು ಸ್ಮರಣಾರ್ಹವಾದ್ದರಿಂದ ಅಂಥ ಗುಣಗಳನ್ನು ಯುವಕರು ಬೆಳೆಸಿಕೊಳ್ಳಬೇಕೆಂದರು.
ಹಿರಿಯ ನ್ಯಾಯವಾದಿ ವೆಂಕಟೇಶ ನಿಂಗಸಾನಿ ಮಾತನಾಡಿ ಧಾರ್ಮಿಕ ಸಾಮರಸ್ಯದ ನೆಲೆವೀಡಾದ ಹೊಸೂರ ಗ್ರಾಮದಲ್ಲಿ ಭಾವೈಕ್ಯತೆಯ ಪ್ರತೀಕವಾಗಿರುವ ಸಿರಾಜಸಾಬ ಮುರಾದಸಾಬ ದರ್ಗಾಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಧರ್ಮದ ಸೊಂಕಿಲ್ಲ. ಪರಸ್ಪರ ಮಾನವೀಯ ಮೌಲ್ಯಗಳ ಸಂರಕ್ಷಣೆಯತ್ತ ಎಲ್ಲ ಜನರೂ ಬದ್ದರಾಗಿದ್ದು, ದೇಶದ ಮುಂದೆ ಧರ್ಮ, ಜಾತಿ-ಮತಗಳು ಪ್ರಧಾನವಾಗದೇ ಮಾತೃಭೂಮಿಯೇ ಮುಖ್ಯವಾಗಬೇಕು.
ಅಂಥ ಸದ್ವಿಚಾರಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಬೇಕೆಂದರು.ಇದೇ ಸಂದರ್ಭದಲ್ಲಿ ಹಾಸ್ಯ ಸಾಹಿತಿ ಯಶವಂತ ವಾಜಂತ್ರಿ.ಸಿರಾಜ್ ಹೊರಟ್ಟಿ. ಹುಸೇನ ಜಮಾದಾರ.ಹಾಫಿಜ್ ಆದಮ್ ಹೊರಟ್ಟಿ, ಫಾರುಕ ನದಾಫ.ಪಿಎಸ್ಐ ಆಗಿ ನೇಮಕವಾಗಿರುವ ಜಯಶ್ರೀ ಮಠಪತಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ, ಹಾರೂನಸಾಬ ಹೊರಟ್ಟಿ, ಅಬ್ದುಲ್ ಹೊರಟ್ಟಿ, ಹಾಫಿಜ್ ಜಮಖಂಡಿ, ಅಕ್ರಮ ಜಮಾದಾರ ಸೇರಿದಂತೆ ನೂರಾರು ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ