ನವದೆಹಲಿ: ತಾಯಿ-ಮಗುವಿನ ಬಾಂಧ್ಯವ್ಯ ತುಂಬಾ ಅನ್ಯೋನ್ಯವಾದದ್ದು. ಆದ್ರೆ ಇಲ್ಲೊಬ್ಬ ತಾಯಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು 5 ವರ್ಷದ ಮಗುವನ್ನು ತಾಯಿ ಕೊಲೆ ಮಾಡಿರುವ ಘಟನೆ ದೆಹಲಿಯಅಶೋಕ್ ವಿಹಾರದಲ್ಲಿ ಘಟನೆ ನಡೆದಿದೆ. ದೀಪ್ ಚಂದ್ ಬಂಧು ಆಸ್ಪತ್ರೆಗೆ ಮಗುವನ್ನು ಕರೆತರುವ ಮಾರ್ಗದಲ್ಲಿ ಮೃತಪಟ್ಟಿದೆ. ಮಗು ಹಾಗೂ ತಾಯಿಯ ಗುರುತನ್ನು ಬಹಿರಂಗಪಡಿಸಿಲ್ಲ.
ಪೊಲೀಸರ ಮಾಹಿತಿಯ ಪ್ರಕಾರ, ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದ್ದು, ಗುರುತುಗಳು ಪತ್ತೆಯಾಗಿವೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿ ಸೇರಿದಂತೆ ಮಗುವಿನ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸತ್ಯ ಬಿಚ್ಚಿಟ್ಟಿದ್ದು, ಸ್ವತಃ ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
Health Tips: ಬೂದುಕುಂಬಳ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?
ಆಕೆಯ ಮೊದಲ ಪತಿ ಅವಳನ್ನು ಬಿಟ್ಟುಹೋಗಿದ್ದ. ಈ ಸಮಯದಲ್ಲಿ ಆಕೆಗೆ ಇನ್ಸ್ಟಾಗ್ರಾಂ ಮೂಲಕ ರಾಹುಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಅದಾದ ಬಳಿಕ ಆತನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಮದುವೆಗಾಗಿ ದೆಹಲಿಯಲ್ಲಿರುವ ರಾಹುಲ್ ಮನೆಗೆ ತೆರಳಿದಾಗ ರಾಹುಲ್ ಮತ್ತು ಆತನ ಕುಟುಂಬದವರು ಆಕೆಗೆ ಮಗುವಿರುವ ಕಾರಣದಿಂದ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯ ಕಾರಣದಿಂದ ಕೊಂದಿರುವುದಾಗಿ ತಿಳಿಸಿದ್ದಾಳೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.