ಬೆಂಗಳೂರು:- ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯತಮೆ ಮೀಟ್ ಮಾಡೋಕೆ ಬಂದಿದ್ದವನನ್ನ ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿ ಸಿನಿಮೀಯ ರೀತಿಯಲ್ಲಿ ತಗಲಾಕ್ಕೊಂಡ ಘಟನೆ ಜರುಗಿದೆ.
IPL Mega Action 2025: IPL ಹರಾಜಿನಲ್ಲಿರುವ ಆಟಗಾರರು ಎಷ್ಟು!? ಸ್ಟಾರ್ ಪ್ಲೇಯರ್ ಗಳು ಇವರೇ ನೋಡಿ!
ಘಟನೆ ಸಂಬಂಧ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ನನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್ಪಿನ್ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ. ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಹತ್ರ ಇರುವ ಚಿನ್ನಾಭರಣ ಹಾಕ್ಕೊಂಡು, ಇನ್ನೋವಾ ಕಾರಿನಲ್ಲಿ ಬಾ ಅಂತಾ ಫೋನ್ ಮಾಡಿದ್ಲು. ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ.
ಈ ವೇಳೆ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಕಿಡ್ನ್ಯಾಪ್ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡೋಕೆ ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳೋಕೆ ಬಂದಿದ್ದರು. ಆದ್ರೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್ನಲ್ಲಿದ್ದ ಪಿಎಸ್ಐ ಮಾದೇಶ್ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಿಯತಮೆ ಮೋನಿಕಾಳೇ ಕಿಂಗ್ ಪಿನ್ ಅನ್ನೋದನ್ನು ಕೇಳಿ ಪ್ರಿಯಕರ ಶಿವ ಶಾಕ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ನನ್ನ ಬಂಧಿಸಿದ್ದಾರೆ. ಬಂಧಿತ ಏಳು ಮಂದಿಯೂ ಆಂಧ್ರದ ನೆಲ್ಲೂರು ಮೂಲದವರು ಎಂದು ತಿಳಿಸಿದ್ದಾರೆ.