ಬಿಗ್ ಬಾಸ್ ಸೀಸನ್ 11ರ ನಿನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಶಿಶಿರ್ ಮೇಲೆ ಸುದೀಪ್ ಸ್ವಲ್ಪ ಗರಂ ಆದರು.
Karnataka Rains: ನವೆಂಬರ್ ನ. 27ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ!
ಕಳಪೆ ಕೊಟ್ಟಾಗಲೂ ರಜತ್ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ಹುಡುಗಿಯರ ಕೈ ಕೈ ಹಿಡಿದುಕೊಂಡು ಓಡಾಡಿದಂತೆ ಅಲ್ಲ ಎಂದಿದ್ರು. ಈ ಮಾತನ್ನು ರಜತ್ ನೀವು ಹೇಳಿದ್ದು ಯಾರಿಗೆ ಎಂದು ಸುದೀಪ್ ಕೇಳಿದ್ರು. ಇದಕ್ಕೆ ಉತ್ತರಿಸಿದ ರಜನ್, ನಾನು ಶಿಶಿರ್ಗೆ ಹೇಳಿದ್ದು ಎಂದ್ರು. ಈ ಮಾತು ಹೇಳಿ ಐಶ್ವರ್ಯಾ, ಶಿಶಿರ್ ಕೂಡ ಶಾಕ್ ಆದ್ರು
ಕೆಂಪೇಗೌಡ ಸಿನಿಮಾದಲ್ಲಿ ಎಷ್ಟು ಪರ್ಸೆಂಟ್ ರೊಮ್ಯಾನ್ಸ್ ಇದೆ. ಎಷ್ಟು ಪರ್ಸೆಂಟ್ ಆ್ಯಕ್ಷನ್ ಇದೆ ಎಂದು ಸುದೀಪ್ ಕೇಳಿದ್ರು. ಇದಕ್ಕೆ ಉತ್ತರಿಸಿದ ಶಿಶಿರ್, 80 ಪರ್ಸೆಂಟ್ ಆ್ಯಕ್ಷನ್, 15 ಪರ್ಸೆಂಟ್ ರೊಮ್ಯಾನ್ಸ್ ಇದೆ ಎಂದ್ರು. ಇದು ಉಲ್ಟಾ ಆದ್ರೆ ಹೇಗಿರುತ್ತೆ ಎಂದು ಸುದೀಪ್ ಕೇಳಿದ್ರು. ಇದಕ್ಕೆ ಉತ್ತರಿಸಿದ ಶಿಶಿರ್, ಚೆನ್ನಾಗಿರಲ್ಲ ಎಂದ್ರು. ನೀವು ಮಾಡ್ತಿರೋದು ಅದನ್ನೇ ಎಂದು ಸುದೀಪ್ ಕೋಪಗೊಂಡ್ರು.
ಈ ವಾರ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಆಟ ಎಲ್ಲೂ ಕಾಣಲಿಲ್ಲ. ಯಾಕೆ ಈ ತರ ಆಯ್ತು. ಅದು ಮೀಸೆ ಬಿಟ್ಟ ಮೇಲೆ ಆಟ ಬದಲಾಗಿದೆ. ಎಲ್ಲೂ ನಿಮ್ಮ ಆಟ ಕಾಣ್ತಿಲ್ಲ ಎಂದು ಸುದೀಪ್ ಪ್ರಶ್ನೆ ಮಾಡಿದ್ರು. ಸುದೀಪ್ ಮಾತು ಕೇಳಿ ಶಿಶಿರ್ ಕೂಡ ಶಾಕ್ ಆದ್ರು.
ಕಳೆದ ವಾರ ರಜತ್ ಅವರು ಮನೆಯಲ್ಲಿ ಸಿಕ್ಕಾಪಟ್ಟೆ ಬೀಪ್ ಪದ ಬಳಕೆ ಮಾಡಿದ್ದರು. ಎಷ್ಟರ ಮಟ್ಟಿಗೆ ಅಂದರೆ ಗೋಲ್ಡ್ ಸುರೇಶ್ ಅವರು ಮನೆಯಿಂದ ಆಚೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದರು. ಇದೀಗ ಕಿಚ್ಚನ ಮುಂದೆ ಈ ಬಗ್ಗೆ ಪ್ರಸ್ತಾವನೆ ಆಗಿದೆ. ಕಿಚ್ಚ ಅವರು ರಜತ್ಗೆ ಕನ್ನಡದಲ್ಲಿ ತುಂಬಾ ಪದಗಳಿವೆ.
ನಿಮ್ಮ ಎಲ್ಲರಿಗೂ ತೂಕಗಳಿವೆ. ನನಗೆ ಕೋಪ ಬಂದಾಗ ಇಂತಹದ್ದೆ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ಸು ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಕಿಚ್ಚ ಸುದೀಪ್ ಕೇಳಿದ್ರು. ಈಗ ನನಗೆ ತಪ್ಪಿನ ಅರಿವಾಯ್ತು ಎಂದಿದ್ದಾರೆ.