ಹಾವೇರಿ: ಬೊಮ್ಮಾಯಿ ಭದ್ರಕೋಟೆ ಕೊನೆಗೂ ಕೈ ವಶವಾಗಿದ್ದು, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಸತತ 6 ಸೋಲಿನ ಬಳಿಕ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಮೂಲಕ ಉಪಕದನದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಿನ ಅಘಾತ ಎದುರಾಗಿದೆ. 2008 ರಿಂದ ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ 4 ಸಲ ಗೆದ್ದಿದ್ದರು. ಆದರೆ ಇದೀಗ ಬೊಮ್ಮಾಯಿ ಪುತ್ರ ಭರತ್ ಗೆ ತೀವ್ರ ಮುಖಭಂಗವಾಗಿದೆ. 1999 ರಿಂದ ಸತತವಾಗಿ ಸೋತಿದ್ದ ಕೈ ಪಡೆಯು ಭಾರೀ ರಣತಂತ್ರ ರೂಪಿಸಿತ್ತು. ಸಿಎಂ, ಡಿಸಿಎಂ ಆದಿಯಾಗಿ ಪ್ರಚಾರ ಕಣದಲ್ಲಿ ಅಬ್ಬರಿಸಿದ್ದರು. ಅಲ್ಲದೇ ಸತೀಸ್ ಜಾರಕಿಹೊಳಿ ನೇತೃತ್ವದ ತಂಡ ಶಿಗ್ಗಾಂವಿಯಲ್ಲಿ ಅಹಿಂದ ಮತಗಳ ಕ್ರೋಢೀಕರಣ ಮಾಡಿದ್ದರು.
ಹಣಬಲದಿಂದ ಸಂಡೂರಿನಲ್ಲಿ ಕಾಂಗ್ರೆಸ್ ಗೆ ಗೆಲುವು : ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು
ಇನ್ನೂ ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿಗಾಗಿ ಕಾಂಗ್ರೆಸ್ ದ್ವಜದಲ್ಲಿ BYE BYE ಬೊಮ್ಮಾಯಿ ಎಂದು ಬರೆಸಿದ್ದು, BYE BYE ಬೊಮ್ಮಾಯಿ ದ್ವಜ ಹಿಡಿದು ವಿಜಯೋತ್ಸವ ಆಚರಿಸಿದ್ದಾರೆ. ಕಾಂಗ್ರೆಸ್ ದ್ವಜದಲ್ಲಿ ಕಮಲದ ಚಿಹ್ನೆ ಉಲ್ಟಾ ಹಾಕಿ BYE BYE ಬೊಮ್ಮಾಯಿ ಎಂದು ಬರೆಸಲಾಗಿದೆ.